ಬೇಸಿಗೆ ತನ್ನ ಪ್ರತಾಪ ತೋರಿಸಲು ಆರಂಭಿಸಿದೆ. ಈ ಅವಧಿಯಲ್ಲಿ ನೀರು ಅಥವಾ ದ್ರವಾಹಾರವನ್ನು ಎಷ್ಟು ಸೇವಿಸಬೇಕೋ ಅಷ್ಟೇ ಸ್ಟ್ರಿಕ್ಟ್ ಆಗಿ ಕೆಲವು ಆಹಾರಗಳಿಂದ ದೂರವಿರಬೇಕು. ಅವುಗಳು ಯಾವುವೆಂದಿರಾ?
ಬಾರ್ಬೆಕ್ಯೂ ಮಾಂಸವನ್ನು ಈ ಅವಧಿಯಲ್ಲಿ ತ್ಯಜಿಸುವುದು ಒಳ್ಳೆಯದು. ಏಕೆಂದರೆ ಇದು ಅತ್ಯಧಿಕ ತಾಪಮಾನದಲ್ಲಿ ಬೇಯಿಸಿ ಸಿದ್ಧವಾಗುತ್ತದೆ. ಇದರಿಂದ ಮಾರಣಾಂತಿಕ ಕಾಯಿಲೆಗಳು ನಿಮ್ಮನ್ನು ಆವರಿಸಿಕೊಳ್ಳುವ ಸಾಧ್ಯತೆ ಇದೆ.
ಕಂಚಿನ ಪ್ರತಿಮೆಯನ್ನು ಇದರಿಂದ ಸ್ವಚ್ಛಗೊಳಿಸಿದರೆ ಮತ್ತೆ ಹೊಳಪಾಗುತ್ತದೆ
ಸೆಕೆಗೆ ಐಸ್ ಕ್ರಿಂ ತಿನ್ನುವುದರಿಂದ ಬಾಯಿಗೆ ರುಚಿ ಹಾಗೂ ಒಮ್ಮೆ ತಂಪೆನಿಸಬಹುದು. ಆದರೆ ಐಸ್ ಕ್ರೀಮ್ ನಲ್ಲಿ ಅತ್ಯಧಿಕ ಪ್ರಮಾಣದ ಸಕ್ಕರೆ ಇದ್ದು ಇದರ ಸೇವನೆಯಿಂದ ಅನಾವಶ್ಯಕ ಬೊಜ್ಜು ಬೆಳೆಯುತ್ತದೆ.
ಬಿಯರ್ ಅಥವಾ ವಿಸ್ಕಿ ಸೇವನೆಯಿಂದ ಒಮ್ಮೆ ನಿಮ್ಮ ಬಾಯಾರಿಕೆ ತೀರಬಹುದು. ಆದರೆ ಇದು ದೇಹದ ತಾಪಮಾನ ಹೆಚ್ಚಿಸಿ ಡಿಹೈಡ್ರೇಶನ್ ಗೆ ಕಾರಣವಾಗುತ್ತದೆ. ಇದರಿಂದ ದೇಹದ ರೋಗ ನಿರೋಧಕ ಶಕ್ತಿಯೂ ಕುಗ್ಗುತ್ತದೆ. ಅದರೊಂದಿಗೆ ಡೈರಿ ಉತ್ಪನ್ನಗಳು, ಜಂಕ್ ಫುಡ್, ಫ್ರೈಡ್ ಫುಡ್ ಗಳಿಂದ ದೂರವಿದ್ದಷ್ಟು ಒಳ್ಳೆಯದು.