alex Certify ಕೊರೊನಾ ಹರಡುವಿಕೆ ಕುರಿತು ಇಲ್ಲಿದೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಹರಡುವಿಕೆ ಕುರಿತು ಇಲ್ಲಿದೆ ಮುಖ್ಯ ಮಾಹಿತಿ

ಫ್ರೋಜನ್ ಅಥವಾ ಹೆಪ್ಪುಗಟ್ಟಿದ ಆಹಾರ ಸೇವನೆಯಿಂದ ವೈರಸ್ ಹರಡುತ್ತದೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ಅದರಂತೆ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (ಸಿಡಿಸಿ) ತನ್ನ ವೆಬ್‌ಸೈಟ್‌ನಲ್ಲಿ, “ಪ್ರಸ್ತುತ, ಈ ಆಹಾರವನ್ನು ಸೇವಿಸುವುದರಿಂದ ಕೊರೊನಾ ಹರಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ” ಎಂದಿದೆ.

ಇದು ಸಿಡಿಸಿ ಹನಿಗಳ ಸಿಂಪಡನೆಯಿಂದ ವ್ಯಕ್ತಿಯಿಂದ ವ್ಯಕ್ತಿಗೆ ನೇರವಾಗಿ ಹರಡುತ್ತದೆ. ಆದ್ದರಿಂದ, ಕೋವಿಡ್ -19 ಆಹಾರದಲ್ಲಿ ಹರಡುವ ಬಗ್ಗೆ ಭೀತಿ ಹೊಂದಬೇಕಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಆಹಾರ ಪ್ಯಾಕೇಜಿಂಗ್ ಅನ್ನು ನಿರ್ವಹಿಸುವಾಗ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಆಹಾರವನ್ನು ತಯಾರಿಸುವ ಮೊದಲು ಅಥವಾ ನಿರ್ವಹಿಸಿದ ನಂತರ ಕನಿಷ್ಠ 20 ಸೆಕೆಂಡುಗಳ ಕಾಲ ಸೋಪ್ ಮತ್ತು ನೀರಿನಿಂದ ಕೈಗಳನ್ನು ಯಾವಾಗಲೂ ತೊಳೆಯುತ್ತಿರಿ.

ಹಾಗಿದ್ದೂ ಇಂಥ ಆಹಾರ ಸೇವನೆಗೆ ಮುನ್ನ ತುಸು ಎಚ್ಚರಿಕೆ ವಹಿಸುವುದು ಮುಖ್ಯ. ಫ್ರೀಜ್ ಮಾಡಿದ ಮಾಂಸಾಹಾರಗಳು ನಿಗದಿತ ಅವಧಿಯೊಳಗೆ ಬಳಕೆಯಾಗಬೇಕು. ದೀರ್ಘ ಕಾಲ ಸಂಗ್ರಹಿಸಿ ಇಟ್ಟುಕೊಳ್ಳಬಾರದು. ಮಳಿಗೆಗಳಿಂದ ತಂದಾಕ್ಷಣ ಹೊರಗಿನ ವಾತಾವರಣದಲ್ಲಿ ಹೆಚ್ಚು ಹೊತ್ತು ಇಡದೆ ತಕ್ಷಣವೇ ಮನೆಯ ಫ್ರಿಜ್ ಗೆ ವರ್ಗಾಯಿಸಬೇಕು. ಇಲ್ಲವೇ ಮಸಾಲೆ ಪದಾರ್ಥಗಳೊಂದಿಗೆ ಬಳಸಿ ತಕ್ಷಣವೇ ಅಡುಗೆ ರೂಪದಲ್ಲಿ ಸೇವಿಸಬೇಕು.

ಇವುಗಳ ಅತಿಯಾದ ಬಳಕೆ ದೇಹದಲ್ಲಿ ಅನಾರೋಗ್ಯಗಳ ಸರಮಾಲೆಯನ್ನೇ ಸೃಷ್ಟಿಸಬಹುದು ಎಂಬುದನ್ನು ನೆನಪಿಡಿ. ಹಾಗಾಗಿ ಇದನ್ನು ನಿರ್ದಿಷ್ಟ ಪ್ರಮಾಣದಲ್ಲೇ ಬಳಸಿ. ವಿಪರೀತ ಸೇವನೆ ಆರೋಗ್ಯಕ್ಕೂ ಒಳ್ಳೆಯದಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...