ಮಳಿಗೆಗಳಲ್ಲೇ ಆಗಲಿ, ಹೊಟೇಲ್ ಗಳಲ್ಲೇ ಆಗಲಿ, ಚಿನ್ನದಂಗಡಿಗಳಲ್ಲೇ ಆಗಲಿ ಸ್ಯಾನಿಟೈಸರ್ ಬಳಸದೆ ಒಳ ಬಿಡುವುದೇ ಇಲ್ಲ. ಅದರೆ ಬಹುತೇಕರಿಗೆ ಇನ್ನೂ ಅದನ್ನು ಹೇಗೆ ಬಳಸುವುದು ಎಂಬುದೇ ಗೊತ್ತಿಲ್ಲ.
ಶೇ.70ರಷ್ಟು ಅಲ್ಕೋಹಾಲ್ ಅಂಶವಿರುವ ಸ್ಯಾನಿಟೈಸರ್ನಲ್ಲಿ ಬ್ಯಾಕ್ಟೀರಿಯಾ ಅಥವಾ ವೈರಸ್ ಗಳನ್ನು ನಾಶ ಮಾಡುವ ಶಕ್ತಿ ಇರುತ್ತದೆ. ಕೈತೊಳೆಯಲು ಸೋಪು ಅಥವಾ ನೀರು ಇಲ್ಲದಾಗಲೂ ಇದನ್ನು ಬಳಕೆ ಮಾಡಬಹುದು.
ಸ್ಯಾನಿಟೈಸರ್ ಕೈಗೆ ಹಾಕಿಕೊಂಡ ಬಳಿಕ 20 ಸೆಕೆಂಡ್ ಕೈ ಉಜ್ಜಿ. ಆಗ ಮಾತ್ರ ವೈರಸ್ ಗಳು ಸಾಯುತ್ತವೆ. ಸ್ಯಾನಿಟೈಸರ್ ಹಚ್ಚಿ ಕೈ ಒರೆಸಿಕೊಂಡರೆ ಅಥವಾ 15 ಸೆಕೆಂಡ್ ಗೂ ಕಡಿಮೆ ಅವಧಿ ತಿಕ್ಕಿಕೊಂಡು ಊಟ ಮಾಡುವುದು ಅಪಾಯಕಾರಿ. ಕೈ ಒಣಗುವ ತನಕ ಉಜ್ಜಿಕೊಳ್ಳಿ.
ಊಟಕ್ಕೆ ಮುನ್ನ ಸ್ಯಾನಿಟೈಸರ್ ಹಾಕಿಕೊಳ್ಳುವ ಬದಲು ಸೋಪು ನೀರಿನಿಂದ ಕೈ ತೊಳೆಯುವುದು ಒಳ್ಳೆಯದು. ಮಕ್ಕಳಿಗೆ ಇದರ ಬಳಕೆ ಕಮ್ಮಿ ಮಾಡಿ. ಅವರು ಆಗಾಗ ತಮ್ಮ ಬೆರಳು ಮತ್ತು ಕೈಗಳನ್ನು ಬಾಯಿಗೆ ಹಾಕಿಕೊಳ್ಳುತ್ತಿರುತ್ತಾರೆ. ಆರೋಗ್ಯದ ತೊಂದರೆಗಳು ಕಂಡುಬಂದಾವು. ಹಾಗಾಗಿ ಆರು ವರ್ಷದೊಳಗಿನ ಮಕ್ಕಳಿಂದ ಸ್ಯಾನಿಟೈಸರ್ ದೂರವಿಡಿ.