ಇಡ್ಲಿ, ದೋಸೆ ತಿಂದರೆ ತೂಕ ಹೆಚ್ಚಾಗುತ್ತೆ ಎನ್ನುವವರು ಒಮ್ಮೆ ಈ ಪ್ರೋಟಿನ್ ನಿಂದ ಕೂಡಿದ ಪಾಲಕ್ , ಹೆಸರುಕಾಳು ದೋಸೆ ಮಾಡಿಕೊಂಡು ತಿಂದು ನೋಡಿ. ಹೊಟ್ಟೆ ತುಂಬುವುದರ ಜತೆಗೆ ಆರೋಗ್ಯಕ್ಕೂ ಒಳ್ಳೆಯದು.
1 ಕಪ್ ಹೆಸರುಕಾಳನ್ನು ರಾತ್ರಿಯೇ ನೆನೆಸಿಡಿ. ಬೆಳಿಗ್ಗೆ ನೆನೆಸಿದ ಹೆಸರುಕಾಳನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ½ ಕಟ್ಟಿನಷ್ಟು ಪಾಲಾಕ್ ಎಲೆಯನ್ನು ಹಾಕಿ ನಂತರ ಒಂದು ಚಮಚ ಜೀರಿಗೆ, 3 ಹಸಿಮೆಣಸು, ಅರ್ಧ ತುಂಡು ಶುಂಠಿ ಹಾಕಿ ಚೆನ್ನಾಗಿ ರುಬ್ಬಿ. ಹೆಚ್ಚು ನೀರು ಸೇರಿಸಿಕೊಳ್ಳಬೇಡಿ.
ಕೆಂಪು ಬಾಳೆಹಣ್ಣು ಸೇವಿಸಿ ಈ ಸಮಸ್ಯೆ ನಿವಾರಿಸಿಕೊಳ್ಳಿ
ನಂತರ ಗ್ಯಾಸ್ ಮೇಲೆ ದೋಸೆ ಪ್ಯಾನ್ ಇಟ್ಟು ತೆಳುವಾಗಿ ದೋಸೆ ಮಾಡಿ. ಇದರ ಮೇಲೆ ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಂಡರೆ ರುಚಿಯಾದ ದೋಸೆ ರೆಡಿ. ಕಾಯಿ ಚಟ್ನಿ ಅಥವಾ ಶೇಂಗಾ ಚಟ್ನಿ ಜತೆ ಇದನ್ನು ಸವಿಯಬಹುದು.