ಅಲೋವೇರಾ, ಚರ್ಮ ಮತ್ತು ಕೂದಲಿನ ಆರೈಕೆಗೆ ತುಂಬಾ ಒಳ್ಳೆಯದು. ಇದರಿಂದ ಕೂದಲಿನ ಮತ್ತು ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅಷ್ಟೇ ಅಲ್ಲದೇ ಈ ಅಲೋವೆರಾವನ್ನು ಬಳಸಿ ತೂಕವನ್ನು ಇಳಿಸಿಕೊಳ್ಳಬಹುದು. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
ಅಲೋವೆರಾ, ದೇಹದಲ್ಲಿರುವ ವಿಷವನ್ನು ಹೊರಹಾಕಲು ಸಹಕಾರಿಯಾಗಿದೆ. ಕರುಳನ್ನು ಸ್ವಚ್ಛಗೊಳಿಸುತ್ತದೆ. ಹಾಗಾಗಿ ಎಲೆಗಳಿಂದ ಜೆಲ್ ತೆಗೆದುಕೊಂಡು ರುಬ್ಬಿಕೊಂಡು ಗಾಜಿನ ಬಾಟಲಿನಲ್ಲಿ ಹಾಕಿ ಫ್ರಿಜ್ ನಲ್ಲಿಟ್ಟುಕೊಳ್ಳಿ. ತೂಕ ಇಳಿಸಿಕೊಳ್ಳಲು ಬಯಸುವವರು 1 ಚಮಚ ಜೆಲ್ ನ್ನು ತೆಗೆದುಕೊಂಡು ನೀರಿನಲ್ಲಿ ಬೆರೆಸಿ ಕುಡಿಯಿರಿ.
ಹಾಲು ಕುಡಿಯಲು ಸರಿಯಾದ ಸಮಯ ಯಾವುದು ಗೊತ್ತಾ?
ಹಾಗೇ ಒಂದು ಲೋಟ ನೀರಿಗೆ 1 ಚಮಚ ನಿಂಬೆ ರಸ ಹಾಗೂ 1 ಚಮಚ ಅಲೋವೆರಾ ಜೆಲ್ ನ್ನು ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಿ. ಬಳಿಕ ಅದು ತಣ್ಣಗಗಾದ ಮೇಲೆ 1 ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಕುಡಿಯಿರಿ. ಹೀಗೆ ಮಾಡುವುದರಿಂದ ಕೂಡ ತೂಕ ಇಳಿಸಿಕೊಳ್ಳಬಹುದು.
*ದೇಹದಲ್ಲಿರುವ ಕೊಬ್ಬನ್ನು ನಿವಾರಿಸಿ ದೇಹದ ತೂಕ ಕಡಿಮೆ ಮಾಡಲು ನೀರಿಗೆ ಅಲೋವೆರಾ ಜೆಲ್ ಹಾಗೂ ಶುಂಠಿ ರಸವನ್ನು ಮಿಕ್ಸ್ ಮಾಡಿ ಸೇವಿಸಿ.