ಇತ್ತೀಚೆಗೆ ತೂಕ ಇಳಿಸುವುದು ಟ್ರೆಂಡ್ ಆಗಿದೆ. ಹಾಗಾಗಿ ಈ ವಲಯದಲ್ಲಿ ಹಲವು ಪ್ರಯೋಗಗಳು ನಡೆಯುತ್ತಿರುತ್ತವೆ. ಇತ್ತೀಚೆಗೆ ಕೇವಲ ಹಾಲಿನ ಸೇವನೆಯಿಂದ ತೂಕ ಇಳಿಸುವುದು ಸಾಧ್ಯವೇ ಎಂಬ ಬಗ್ಗೆ ಸಂಶೋಧನೆಯೊಂದು ನಡೆದಿದೆ.
ಬೊಜ್ಜಿನಿಂದ ಬರುವ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಹಾಲು ಹೇಗೆ ಔಷಧವಾಗಬಹುದು ಎಂಬುದನ್ನು ಕಂಡುಹಿಡಿಯುವುದು ತಜ್ಞರ ಇಂಗಿತವಾಗಿತ್ತು. ಹಾಲಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಇದು ದೇಹದಲ್ಲಿ ಜಮೆಯಾಗಿರುವ ಕೊಬ್ಬನ್ನು ತೆಗೆಯುತ್ತದೆ ಎಂಬುದು ತಿಳಿದ ವಿಷಯ. ಹಾಲು ಕುಡಿಯುವುದರಿಂದ ನಿಮಗೆ ಹೆಚ್ಚು ಹೊತ್ತು ಹಸಿವಾಗುವುದಿಲ್ಲ ಮತ್ತು ಹೊಟ್ಟೆ ತುಂಬಿದ ಅನುಭವವಾಗುತ್ತದೆ.
ಬೇರೆ ಪಾನೀಯಗಳಿಗಿಂತ ಹಾಲು ತೂಕ ಇಳಿಸಲು ಹೆಚ್ಚು ಉಪಕಾರಿ ಎಂಬುದು ಮನದಟ್ಟಾಯಿತು. ಇದರಲ್ಲಿ ಸಂಸ್ಕರಿಸಿದ ಸಕ್ಕರೆಯೂ ಇಲ್ಲ. ನೈಸರ್ಗಿಕವಾಗಿ ಹಾಲು ಸಿಹಿ ಆಗಿರುವುದರಿಂದ ಇದು ಸಹಜವಾಗಿಯೇ ಕ್ಯಾಲರಿ ಸೇವನೆಯನ್ನು ಕಡಿಮೆ ಮಾಡುತ್ತದೆ.
ಹಾಲಿನಲ್ಲಿ ಹಲವು ಪ್ರಮುಖ ಪೋಷಕಾಂಶಗಳಿದ್ದು ದೇಹದ ವಿಷಕಾರಿ ತ್ಯಾಜ್ಯಗಳ ಹೊರ ಹಾಕುವಿಕೆಗೂ ಇದು ಸಹಾಯ ಮಾಡುತ್ತದೆ. ಬೆಳಗಿನ ಉಪಾಹಾರದ ವೇಳೆ ಕೊಬ್ಬು ರಹಿತ ಹಾಲು ಕುಡಿಯಿರಿ. ಬೇಯಿಸಿದ ಮೊಟ್ಟೆ ತಿನ್ನಿ. ಬ್ರೆಡ್ ಗೆ ತುಪ್ಪ ಹಚ್ಚದೆ ಸೇವಿಸಿ. ರಾತ್ರಿ ಮಲಗುವ ಮುನ್ನವೂ ಕೊಬ್ಬು ರಹಿತ ಹಾಲು ಕುಡಿಯಿರಿ.