alex Certify ಡೆಂಗ್ಯು ಜ್ವರ ಇರುವವರು ಈ ಆಹಾರವನ್ನು ಸೇವಿಸಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೆಂಗ್ಯು ಜ್ವರ ಇರುವವರು ಈ ಆಹಾರವನ್ನು ಸೇವಿಸಬೇಡಿ

ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಕಾಯಿಲೆಯಾಗಿದೆ. ಈ ಡೆಂಗ್ಯೂ ಜ್ವರ ಬೇಗನೆ ವಾಸಿಯಾಗಲು ಔಷಧದ ಜೊತೆಗೆ ಸರಿಯಾದ ಆಹಾರಗಳನ್ನು ಸೇವಿಸಬೇಕು. ಯಾಕೆಂದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕಾಗುತ್ತದೆ. ಆಗ ಮಾತ್ರ ಈ ಜ್ವರದಿಂದ ಬೇಗ ಮುಕ್ತಿ ಸಿಗುತ್ತದೆ. ಹಾಗಾಗಿ ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರು ಈ ಆಹಾರಗಳನ್ನು ಸೇವಿಸಬೇಡಿ.

*ಎಣ್ಣೆಯುಕ್ತ ಆಹಾರವು ಹೆಚ್ಚಿನ ಕೊಬ್ಬನ್ನು ಹೊಂದಿರುತ್ತದೆ. ಇದು ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಉಂಟುಮಾಡುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.

*ಕೆಫೀನ್ ನಿರ್ಜಲೀಕರಣ, ಹೃದಯ ಬಡಿತ ಹೆಚ್ಚಾಗುವಿಕೆ, ಆಯಾಸವನ್ನು ಹೆಚ್ಚಿಸುತ್ತದೆ. ಹಾಗಾಗಿ ಡೆಂಗ್ಯೂ ರೋಗಿಗಳು ಇಂತಹ ಪಾನೀಯಗಳನ್ನು ತಪ್ಪಿಸಬೇಕು.

*ಈ ಜ್ವರದಿಂದ ಬಳಲುತ್ತಿರುವವರು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸುವುದು ಉತ್ತಮ. ಹಾಗಾಗಿ ಇವರು ಮಾಂಸ, ಡೈರಿ, ಮೊಟ್ಟೆಗಳಂತಹ ಆಹಾರವನ್ನು ಸೇವಿಸಬೇಡಿ.

*ಡೆಂಗ್ಯು ರೋಗಿಗಳಿಗೆ ಆಲ್ಕೋಹಾಲ್ ತುಂಬಾ ಹಾನಿಯನ್ನುಂಟು ಮಾಡುತ್ತದೆ. ಈ ಜ್ವರ ಬಂದಾಗ ದೇಹವನ್ನು ಹೆಚ್ಚು ಹೈಡ್ರೀಕರಿಸಬೇಕು. ಆದರೆ ಆಲ್ಕೋಹಾಲ್ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...