ಗರ್ಭಿಣಿಯರು ಕೆಲವೊಂದು ವಸ್ತುಗಳಿಂದ ದೂರವಿರುವುದು ಒಳ್ಳೆಯದು ಎಂದು ಮನೆಯ ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ಯಾವುದು ಆ ವಸ್ತುಗಳು ಎಂಬುದು ನಿಮಗೆ ಗೊತ್ತೇ..?
ವಿಪರೀತ ಕಾಫಿ ಸೇವನೆಯಿಂದ ಗರ್ಭಪಾತವಾಗುವ ಸಂಭವವಿದೆ. ಅಥವಾ ಕೆಲವೊಮ್ಮೆ ಮಗುವಿನ ತೂಕ ಕಡಿಮೆಯಾಗಲೂ ಇದು ಕಾರಣವಾಗಬಹುದು. ಹೀಗಾಗಿ ಕೆಫಿನ್ ನಿಂದ ದೂರವಿರುವುದು ಒಳ್ಳೆಯದು.
ಸಾಮಾನ್ಯವಾಗಿ ಮನೆಗಳಲ್ಲಿ ಗರ್ಭಿಣಿ ಇರುವುದು ಖಚಿತವಾದ ಬಳಿಕ ಪಪ್ಪಾಯ ಹಣ್ಣು ತರುವುದೇ ಇಲ್ಲ. ಇದರಲ್ಲಿ ಹೆಚ್ಚಿನ ಉಷ್ಣಕಾರಕ ಅಂಶಗಳು ಇರುವುದರಿಂದ ಇದರ ಸೇವನೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.
ಹಸಿಮೊಟ್ಟೆ ಸೇವನೆಯಿಂದ ಕೆಲವೊಮ್ಮೆ ಫುಡ್ ಪಾಯ್ಸನಿಂಗ್ ಆಗುವ ಸಾಧ್ಯತೆಗಳಿವೆ. ಹೀಗಾಗಿ ಹಸಿಯಾದ ಮೊಟ್ಟೆ ಸೇರಿದಂತೆ, ಬೇಯಿಸದ ಹೆಚ್ಚಿನ ವಸ್ತುಗಳಿಂದ ದೂರವಿರುವುದೇ ಒಳ್ಳೆಯದು.
ಪಪ್ಪಾಯ ಹಣ್ಣಿನಂತೆ ಅನನಾಸು ಹಣ್ಣಿನಿಂದಲೂ ದೂರವಿರಿ. ಪಾಶ್ಚರೀಕರಿಸಿದ ಹಾಲಿನ ಪದಾರ್ಥಗಳು, ಪನೀರ್ ಬಳಕೆ ಕಡಿಮೆ ಇದ್ದಷ್ಟು ಒಳ್ಳೆಯದು.