ಮಕ್ಕಳು ಹಾಲು ಕುಡಿಯುವುದಿಲ್ಲ ಎಂದು ಹಠ ಮಾಡಿದಾಗ ಅದಕ್ಕೆ ಸಕ್ಕರೆ ಬೆರೆಸಿ ಕೊಡುವ ಬದಲು ನಾಲ್ಕಾರು ಕಾಳು ಕಲ್ಲುಸಕ್ಕರೆ ಬೆರೆಸಿ. ಇದರಿಂದ ಮಕ್ಕಳ ಆರೋಗ್ಯವೂ ಚೆನ್ನಾಗಿರುತ್ತದೆ, ಹಾಲು ಬೇಗ ಖಾಲಿಯಾಗುತ್ತದೆ.
ಕಲ್ಲುಸಕ್ಕರೆ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುವುದು ಮಾತ್ರವಲ್ಲ. ಕ್ಯಾಲ್ಸಿಯಂ ಅನ್ನೂ ಒದಗಿಸುತ್ತದೆ. ಮೂಳೆ ಮತ್ತು ಹಲ್ಲುಗಳನ್ನು ದೃಢಗೊಳಿಸುತ್ತದೆ. ಇದರಲ್ಲಿ ವಿಟಮಿನ್ ಗಳ ಆಗರವೇ ಇದ್ದು ಪ್ರೊಟೀನ್, ಖನಿಜಗಳನ್ನೂ ಒಳಗೊಂಡಿದೆ.
ʼಕಿಡ್ನಿ ಸ್ಟೋನ್ʼ ಸಮಸ್ಯೆಗೆ ರಾಮಬಾಣ ಬಾಳೆದಿಂಡು
ವೈರಲ್ ಸೋಂಕಿನಿಂದ ಬರುವ ಕೆಮ್ಮು, ಶೀತ ಹಾಗೂ ಗಂಟಲು ನೋವಿನಂಥ ಸಮಸ್ಯೆಗಳಿಗೆ ಇದು ಹೇಳಿ ಮಾಡಿಸಿದ ಮದ್ದು. ದೃಷ್ಟಿ ದೋಷವನ್ನು ಪರಿಹರಿಸಲು ನೀವು ನಿತ್ಯ ಕಲ್ಲು ಸಕ್ಕರೆ ಬೆರೆಸಿದ ಹಾಲನ್ನು ಸೇವಿಸಿ.
ಹಾಲಿಗೆ ಕಲ್ಲುಸಕ್ಕರೆ ಸೇರಿಸಿ ಕುಡಿಯುವುದರಿಂದ ಜೀರ್ಣ ವ್ಯವಸ್ಥೆ ಸುಧಾರಿಸುತ್ತದೆ. ಗ್ಯಾಸ್, ಮಲಬದ್ಧತೆಯಂಥ ಸಮಸ್ಯೆಗಳು ದೂರವಾಗುತ್ತವೆ. ಮೆದುಳಿನ ಸಾಮರ್ಥ್ಯ ಹೆಚ್ಚಿ, ಮಾನಸಿಕ ಆಯಾಸವೂ ದೂರವಾಗುತ್ತದೆ. ಹಾಗಾಗಿ ಮಕ್ಕಳಿಗೆ ತಿನ್ನಲು ಅಥವಾ ಹಾಲಿನೊಂದಿಗೆ ಬೆರೆಸಿ ಕಲ್ಲುಸಕ್ಕರೆ ನೀಡಲು ಮರೆಯದಿರಿ.