ಭಾರತದಲ್ಲಿರೋ ಹೇರ್ ಕಟ್ ಮಳಿಗೆಗಳಲ್ಲೆಲ್ಲ ಸಾಮಾನ್ಯವಾಗಿ ಕೂದಲು ಕತ್ತರಿಸಿದ ಬಳಿಕ ಕುತ್ತಿಗೆಗೆ ಮಸಾಜ್ ಮಾಡುವ ಪರಿಪಾಠವಿದೆ. ಕ್ಷೌರಿಕ ನಿಮ್ಮ ತಲೆ ಮತ್ತು ಗಲ್ಲವನ್ನು ಹಿಡಿದುಕೊಂಡು ಕುತ್ತಿಗೆಯನ್ನು ಎಡಕ್ಕೆ, ಬಲಕ್ಕೆ ವೇಗವಾಗಿ ತಿರುಗಿಸುತ್ತಾನೆ. ಈ ವೇಳೆ ಸ್ವಲ್ಪ ಯಡವಟ್ಟಾದ್ರೂ ಕತ್ತಿನಲ್ಲಿರುವ ನರಗಳಿಗೆ ತೊಂದರೆಯಾಗುವ ಅಪಾಯವಿದೆ.
ಇದಕ್ಕೆ ಉದಾಹರಣೆಯೆಂಬಂತೆ ವ್ಯಕ್ತಿಯೊಬ್ಬರು. ಸ್ವಲ್ಪ ರಿಲ್ಯಾಕ್ಸ್ ಆಗೋಣ ಅಂತ ಕುತ್ತಿಗೆಯ ಮಸಾಜ್ ಮಾಡಿಸಿಕೊಂಡಿದ್ದರು. ಈ ರೀತಿ ಮಾಡುವಾಗ ಅವರ ಕುತ್ತಿಗೆಯ ನರಕ್ಕೆ ಕ್ರ್ಯಾಕ್ ಬಂದಿದೆ. ಅದು ಧ್ವನಿಫಲಕ ಮತ್ತು ಉಸಿರಾಟವನ್ನು ನಿಯಂತ್ರಿಸುವ ಬಹು ಮುಖ್ಯವಾದ ನರ.
ಹಾಗಾಗಿ ಅವರು ಆಸ್ಪತ್ರೆ ಸೇರಿದ್ದರು. ಅವರಿಗೆ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಈ ವ್ಯವಸ್ಥೆಗೇ ಹಾನಿಯಾಗಿರುವುದರಿಂದ ಜೀವಮಾನವಿಡೀ ಪರಿತಪಿಸಬೇಕಾಗುತ್ತದೆ ಅಂತಾ ವೈದ್ಯರು ತಿಳಿಸಿದ್ದರು.
ಕುತ್ತಿಗೆಗೆ ಈ ರೀತಿ ಮಸಾಜ್ ಮಾಡಿದರೆ ನರಗಳು ಸಡಿಲವಾಗುತ್ತವೆ, ರಿಲ್ಯಾಕ್ಸ್ ಆಗುತ್ತವೆ ಎಂದೇ ಜನರು ಭಾವಿಸಿದ್ದಾರೆ. ಆದ್ರೆ ಅದರಿಂದ ನರಗಳಿಗೆ ಹಾನಿಯಾಗುತ್ತದೆ ಅಂತಾ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಈ ನೆಕ್ ಮಸಾಜ್ ನಿಮ್ಮ ಪ್ರಾಣಕ್ಕೇ ಕುತ್ತು ತರಬಹುದು, ಅಥವಾ ಪಾರ್ಶ್ವವಾಯುವಿಗೆ ತುತ್ತಾಗುವ ಸಂಭವವೂ ಇರುತ್ತದೆ.