ಈಗ ಕೊರೊನಾ ಭಯದಿಂದ ಎಲ್ಲರೂ ಮುಖಕ್ಕೆ ಮಾಸ್ಕ್, ಕೈಗೆ ಸ್ಯಾನಿಟೈಸರ್ ಹಾಕಿಕೊಳ್ಳುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಈ ಸ್ಯಾನಿಟೈಸರ್ ಗೆ ದುಪ್ಪಟ್ಟು ದುಡ್ಡು ತೆತ್ತು ತರಬೇಕಾಗುತ್ತದೆ. ಅದರ ಬದಲು ನಿಮ್ಮ ಮನೆಯಲ್ಲಿ ಸುಲಭವಾಗಿ ಸ್ಯಾನಿಟೈಸರ್ ಮಾಡಿಕೊಳ್ಳಬಹುದು ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಾಗ್ರಿಗಳು:
ಬೇವಿನ ಎಲೆ – 1 ಹಿಡಿ, ಅರಿಶಿನ – 1ಟೀ ಸ್ಪೂನ್, ಅಲೋವರಾ – 1 ತುಂಡು, ಕರ್ಪೂರ – 2.
ಮಾಡುವ ವಿಧಾನ:
ಮೊದಲಿಗೆ ಬೇವಿನ ಎಲೆಯನ್ನು ಚೆನ್ನಾಗಿ ತೊಳೆದುಕೊಳ್ಳಿರಿ. ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ 1 ಗ್ಲಾಸ್ ನೀರು ಹಾಕಿ ಗ್ಯಾಸ್ ನಲ್ಲಿ ಮಧ್ಯಮ ಉರಿಯಲ್ಲಿ ಕುದಿಯಲು ಇಡಿ. ಇದು ಕುದಿ ಬರುತ್ತಿದ್ದಂತೆ ಅದಕ್ಕೆ ಬೇವಿನ ಎಲೆಯನ್ನು ಹಾಕಿ 5 ನಿಮಿಷಗಳ ಕಾಲ ಕುದಿಸಿ. ನಂತರ ಅದಕ್ಕೆ 1 ಟೀ ಸ್ಪೂನ್ ಅರಿಶಿನ, 2 ಕರ್ಪೂರ ಸೇರಿಸಿ ಕುದಿಯಲು ಬಿಡಿ. 4 ನಿಮಿಷಗಳ ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ.
ಆಲೋವರದ ಒಳಗಿರುವ ಲೋಳೆಯನ್ನು ಒಂದು ಚಮಚದ ಸಹಾಯದಿಂದ ತೆಗೆದುಕೊಂಡು ಒಂದು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ಒಂದು ಬೌಲ್ ಗೆ ಸೋಸಿಕೊಳ್ಳಿ.
ನಂತರ ಮಾಡಿಟ್ಟುಕೊಂಡ ಬೇವಿನ ಎಲೆಯ ಮಿಶ್ರಣದ ನೀರನ್ನು ಒಂದು ಗ್ಲಾಸ್ ಗೆ ಸೋಸಿಕೊಳ್ಳಿ. ಅಲೋವೆರಾ ಹಾಗೂ ಬೇವಿನ ಎಲೆಯ ನೀರು ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಒಂದು ಸ್ಪ್ರೇ ಬಾಟಲಿಗೆ ಹಾಕಿಕೊಂಡು ಚೆನ್ನಾಗಿ ಶೇಕ್ ಮಾಡಿ. ನಂತರ ಇದನ್ನು ಉಪಯೋಗಿಸಿ.