alex Certify ಆಟಿಸಂ ಸಮಸ್ಯೆ ಇರುವ ಮಕ್ಕಳಿಗೆ ಈ ಆಹಾರ ಬೇಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟಿಸಂ ಸಮಸ್ಯೆ ಇರುವ ಮಕ್ಕಳಿಗೆ ಈ ಆಹಾರ ಬೇಡ

ಆಟಿಸಂ ಎನ್ನುವುದು ಮಗುವಿನ ಅರಿವಿನ ಸಾಮರ್ಥ್ಯ ಮತ್ತು ಸಂವಹನದ ಮೇಲೆ ಪರಿಣಾಮ ಬೀರುತ್ತದೆ. ಈ ಕಾಯಿಲೆಗೆ ಒಳಗಾದ ಮಕ್ಕಳು ಜೀರ್ಣಕ್ರಿಯೆ ಸಮಸ್ಯೆಯನ್ನು ಅನುಭವಿಸುತ್ತಾರೆ. ಹಾಗಾಗಿ ಪೋಷಕರು ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹಾಗಾಗಿ ಅವರಿಗೆ ಯಾವ ಆಹಾರಗಳನ್ನು ನೀಡಬಾರದು, ಯಾವ ಆಹಾರಗಳನ್ನು ನೀಡಬೇಕು ಎಂಬುದನ್ನು ತಿಳಿದುಕೊಳ್ಳಿ.

*ಈ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಸಕ್ಕರೆ ಬಳಸಿದ ಆಹಾರಗಳನ್ನು ಹೆಚ್ಚಾಗಿ ನೀಡಬೇಡಿ. ಇದು ಮಕ್ಕಳ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.

*ಗೋಧಿ, ಬಾರ್ಲಿ, ಮುಂತಾದ ಅಂಟು ಆಹಾರವನ್ನು ನೀಡಬೇಡಿ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಕರುಳಿನ ಸಮಸ್ಯೆ ಕಾಡುತ್ತದೆ.

ಮಕ್ಕಳು ಗೋಡೆ ತುಂಬಾ ಗೀಚಿಟ್ಟಿದ್ದಾರಾ….?

* ವಿಟಮಿನ್ ಸಿ ಕೊರತೆ ಮಕ್ಕಳಲ್ಲಿ ಆಟಿಸಂ ಅಪಾಯನ್ನುಂಟುಮಾಡುತ್ತದೆ. ಹಾಗಾಗಿ ಮಕ್ಕಳಿಗೆ ಹೆಚ್ಚಾಗಿ ಕಿತ್ತಳೆ, ನಿಂಬೆ, ಟೊಮೆಟೊ ಮುಂತಾದ ಆಹಾರವನ್ನು ನೀಡಿ.

*ಈ ಮಕ್ಕಳಲ್ಲಿ ಮೆದುಳಿನ ಸಮಸ್ಯೆ ಇರುವುದರಿಂದ ಒಮೆಗಾ 3 ಕೊಬ್ಬಿನಾಮ್ಲವಿರುವ ಆಹಾರವನ್ನು ಹೆಚ್ಚಾಗಿ ಸೇವಿಸಿ. ಇದು ಮೆದುಳಿನ ಬೆಳವಣಿಗೆಗೆ ಸಹಕಾರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...