alex Certify ಚಹಾ, ಕಾಫಿ ಕುಡಿಯದಿದ್ದರೆ ನಿದ್ದೆನೇ ಬರಲ್ವಾ….? ಚಿಂತೆ ಬಿಟ್ಟು ಬಿಡಿ, ಆರಾಮಾಗಿ ಕುಡಿಯಿರಿ: ನಿಮಗಿದೆ ಗುಡ್ ನ್ಯೂಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಹಾ, ಕಾಫಿ ಕುಡಿಯದಿದ್ದರೆ ನಿದ್ದೆನೇ ಬರಲ್ವಾ….? ಚಿಂತೆ ಬಿಟ್ಟು ಬಿಡಿ, ಆರಾಮಾಗಿ ಕುಡಿಯಿರಿ: ನಿಮಗಿದೆ ಗುಡ್ ನ್ಯೂಸ್….!

ಬೆಳಗೆದ್ದು ಚಹಾ ಅಥವಾ ಕಾಫಿ ಕುಡಿಯದಿದ್ದರೆ ಕೆಲವರಿಗೆ ಸಮಾಧಾನವೇ ಇರುವುದಿಲ್ಲ. ಏನೋ ಕಳೆದುಕೊಂಡ ಹಾಗೆ ಆಗುತ್ತದೆ. ಕೆಲವರು ಟೀ, ಕಾಫಿ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಆದರೆ, ಇದೀಗ ನಿಮಗೆ ಒಂದು ಸಿಹಿ ಸುದ್ದಿಯನ್ನು ಸಂಶೋಧಕರು ನೀಡಿದ್ದಾರೆ.

ಚಹಾ ಮತ್ತು ಕಾಫಿ ಕುಡಿಯುವುದರಿಂದ ಬುದ್ಧಿಮಾಂದ್ಯತೆ, ಪಾರ್ಶ್ವವಾಯು ಬೆಳವಣಿಗೆಯ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು ಎಂದು ಹೊಸ ಅಧ್ಯಯನ ವರದಿಯು ಕಂಡುಹಿಡಿದಿದೆ. ಯುಕೆ ಬಯೋಬ್ಯಾಂಕ್‌ನಲ್ಲಿ ಪಿಎಲ್ಒಎಸ್ ಈ ಮಹತ್ತರವಾದ ವರದಿಯನ್ನು ಪ್ರಕಟಿಸಿದೆ.

ಕಾಫಿ ಮತ್ತು ಚಹಾವನ್ನು ಪ್ರತ್ಯೇಕವಾಗಿ ಅಥವಾ ಒಟ್ಟಿಗೆ ಕುಡಿಯುವುದು ಪಾರ್ಶ್ವವಾಯು ಅಪಾಯವನ್ನು ಸಾಧ್ಯವಾದಷ್ಟು ಕಡಿಮೆ ಮಾಡುತ್ತದೆ ಎಂದು ಹೇಳಿದೆ. ಅಲ್ಲದೆ ಬುದ್ಧಿಮಾಂದ್ಯತೆಯ ಅಪಾಯ ಕೂಡ ಇದರಿಂದ ಬಹಳ ಕಡಿಮೆ ಎಂದು ಅಧ್ಯಯನ ವರದಿ ತಿಳಿಸಿದೆ.

ಈ ಅಧ್ಯಯನದಲ್ಲಿ 365, 682 ಮಂದಿ ಭಾಗವಹಿಸಿದ್ದು (50 ರಿಂದ 74 ವರ್ಷ ವಯಸ್ಸಿನವರು) ತಮ್ಮ ಕಾಫಿ ಮತ್ತು ಚಹಾ ಸೇವನೆಯನ್ನು ವರದಿ ಮಾಡಿದ್ದಾರೆ.

ದಿನಕ್ಕೆ ಎರಡರಿಂದ ಮೂರು ಕಪ್ ಕಾಫಿ ಅಥವಾ ಮೂರರಿಂದ ಐದು ಕಪ್ ಚಹಾವನ್ನು ಕುಡಿಯುವುದು ಅಥವಾ ದಿನಕ್ಕೆ ನಾಲ್ಕರಿಂದ ಆರು ಕಪ್‌ಗಳಷ್ಟು ಟೀ ಹಾಗೂ ಕಾಫಿಯನ್ನು ಒಟ್ಟಿಗೆ ಕುಡಿಯುವುದರಿಂದ ಪಾರ್ಶ್ವವಾಯು ಮತ್ತು ಬುದ್ಧಿಮಾಂದ್ಯತೆಯ ಅಪಾಯ ಕಡಿಮೆ  ಇರುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಪ್ರತಿದಿನ ಎರಡರಿಂದ ಮೂರು ಕಪ್ ಕಾಫಿ ಜೊತೆಗೆ ಎರಡರಿಂದ ಮೂರು ಕಪ್ ಚಹಾವನ್ನು ಕುಡಿಯುವುದರಿಂದ ಪಾರ್ಶ್ವವಾಯುವಿನ ಅಪಾಯವು ಶೇಕಡಾ 32 ರಷ್ಟು ಕಡಿಮೆ ಮತ್ತು ಬುದ್ಧಿಮಾಂದ್ಯತೆಯ ಅಪಾಯವು ಶೇಕಡಾ 28 ರಷ್ಟು ಕಡಿಮೆ ಎಂದು ತಿಳಿಸಿದೆ.

ಕಾಫಿ ಮತ್ತು ಚಹಾ ಎರಡೂ ಟೈಪ್-2 ಡಯಾಬಿಟಿಸ್, ಅಧಿಕ ರಕ್ತದೊತ್ತಡ ಮತ್ತು ಸಿಎಡಿ ಸೇರಿದಂತೆ ಕಡಿಮೆ ಕಾರ್ಡಿಯೋಮೆಟಾಬಾಲಿಕ್ ಅಪಾಯಗಳಿಗೆ ಸಂಬಂಧಿಸಿವೆ. ಹೀಗಾಗಿ, ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ಪಾರ್ಶ್ವವಾಯು ಮತ್ತು ಬುದ್ಧಿಮಾಂದ್ಯತೆಯ ಅಪಾಯವನ್ನು ತಡೆಗಟ್ಟಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...