alex Certify ‘ಡಾರ್ಕ್ ಸರ್ಕಲ್’ ಸಮಸ್ಯೆಗೆ ಮನೆಯಲ್ಲಿಯೇ ಇದೆ ಔಷಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಡಾರ್ಕ್ ಸರ್ಕಲ್’ ಸಮಸ್ಯೆಗೆ ಮನೆಯಲ್ಲಿಯೇ ಇದೆ ಔಷಧಿ

Image result for these-effective- home remedies-will-disappear-dark-circle-forever-in-3-days

ಸೂರ್ಯನ ಕಿರಣ, ಕೆಟ್ಟ ಆಹಾರ ಪದ್ದತಿ, ನಿದ್ರೆ ಕೊರತೆ, ಒತ್ತಡ ಕಣ್ಣಿನ ಕೆಳ ಭಾಗ ಕಪ್ಪಾಗಲು ಕಾರಣವಾಗುತ್ತದೆ. ಇದ್ರಿಂದ ಮುಖ ವಯಸ್ಸಾದಂತೆ ಕಾಣಲು ಶುರುವಾಗುತ್ತದೆ.

ಮುಖ ಸೌಂದರ್ಯ ಕಳೆದುಕೊಳ್ಳುತ್ತದೆ. ಈ ಸಮಸ್ಯೆಯಿಂದ ಹೊರ ಬರಲು ಮಾರುಕಟ್ಟೆಯಲ್ಲಿ ಸಿಗುವ ಸಾಕಷ್ಟು ಕ್ರೀಂ ಬಳಸ್ತೇವೆ. ಜೊತೆಗೆ ಬ್ಯೂಟಿ ಪಾರ್ಲರ್ ಮೊರೆ ಹೋಗ್ತೇವೆ.

ಆದ್ರೆ ಮನೆಯಲ್ಲಿಯೇ ನಿಮ್ಮ ಸಮಸ್ಯೆಗೆ ಔಷಧಿಯಿದೆ. ಮೂರೇ ದಿನದಲ್ಲಿ ಕಣ್ಣಿನ ಕೆಳಗಿದ್ದ ಕಪ್ಪು ಕಲೆ ಈ ಔಷಧಿಯಿಂದ ಮಂಗಮಾಯ.

ರೋಸ್ ವಾಟರ್ : ಪ್ರತಿದಿನ ಕಣ್ಣಿನ ಕೆಳ ಭಾಗಕ್ಕೆ ಹತ್ತಿ ಸಹಾಯದಿಂದ ರೋಸ್ ವಾಟರನ್ನು ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ಕಣ್ಣನ್ನು ಸ್ವಚ್ಛಗೊಳಿಸಿಕೊಳ್ಳಿ. ಇದ್ರಿಂದ ಕಣ್ಣು ಫ್ರೆಶ್ ಆಗಿ ಕಾಣುವ ಜೊತೆಗೆ ಕಣ್ಣಿನ ಕೆಳ ಭಾಗದಲ್ಲಿದ್ದ ಕಪ್ಪು ಕಲೆ ಕೂಡ ಕಡಿಮೆಯಾಗುತ್ತದೆ.

ಟೀ ಪುಡಿ : ಟೀ ಪುಡಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ನಂತ್ರ ಹತ್ತಿ ಸಹಾಯದಿಂದ ಕಣ್ಣಿನ ಕೆಳಭಾಗಕ್ಕೆ ಹಚ್ಚಿ 15-20 ನಿಮಿಷ ಬಿಡಿ. ಪ್ರತಿದಿನ ಹೀಗೆ ಮಾಡಿದ್ರೆ ಮೂರೇ ದಿನಗಳಲ್ಲಿ ಕಣ್ಣಿನ ಕೆಳ ಭಾಗದಲ್ಲಿರುವ ಕಪ್ಪು ಕಲೆ ಕಡಿಮೆಯಾಗುತ್ತದೆ.

ಬಾದಾಮಿ ಎಣ್ಣೆ : ಬಾದಾಮಿ ಎಣ್ಣೆಯನ್ನು ಕಣ್ಣಿನ ಕೆಳಗೆ 15-20 ನಿಮಿಷವಿಡಿ. 10 ನಿಮಿಷ ನಿಧಾನವಾಗಿ ಮಸಾಜ್ ಮಾಡಿ. ನಂತ್ರ ಹತ್ತಿ ಸಹಾಯದಿಂದ ಸ್ವಚ್ಛಗೊಳಿಸಿ.

ಪುದೀನಾ : ಪುದೀನಾ ಎಲೆಗಳನ್ನು ರುಬ್ಬಿ 10 ನಿಮಿಷಗಳ ಕಾಲ ಕಣ್ಣಿನ ಕೆಳಗೆ ಹಚ್ಚಿಕೊಳ್ಳಿ. ಇದು ಡಾರ್ಕ್ ಸರ್ಕಲ್ ಕಡಿಮೆ ಮಾಡಲು ನೆರವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...