alex Certify ತ್ವಚೆಯ ರಕ್ಷಣೆಗೆ ಬೆಸ್ಟ್‌ ಈ ನ್ಯಾಚುರಲ್‌ ಮಾಸ್ಕ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತ್ವಚೆಯ ರಕ್ಷಣೆಗೆ ಬೆಸ್ಟ್‌ ಈ ನ್ಯಾಚುರಲ್‌ ಮಾಸ್ಕ್‌

ಬೇಸಿಗೆಯ ಬೇಗೆಗೆ ತ್ವಚೆ ಕಳೆಗುಂದುತ್ತದೆ. ತಾಜಾತನ ಕಳೆದುಕೊಂಡು ಕೆಲವೊಮ್ಮೆ ಕಪ್ಪುಚುಕ್ಕೆ, ಮೊಡವೆಯಂಥ ಸಮಸ್ಯೆ ಕೂಡ ಉಂಟಾಗುತ್ತದೆ. ಈ ಸಂದರ್ಭದಲ್ಲಿ ತ್ವಚೆಯ ರಕ್ಷಣೆ ಮಾಡಬೇಕಾದ ಅಗತ್ಯವಿದೆ. ಇದಕ್ಕಾಗಿ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ ಮಾಸ್ಕ್‌ ಬಳಸಿದರೆ ತುಂಬಾ ಪ್ರಯೋಜನಕಾರಿ.

ಅಲೋವೆರಾ ಮತ್ತು ಟೀ ಮರದ ಎಣ್ಣೆ :

ನೈಸರ್ಗಿಕವಾಗಿ ಸಿಗುವ ಅಲೋವೆರಾ ರಸ, ಕೆಲವು ಹನಿ ಟೀ ಮರದ ಎಣ್ಣೆ ಇವೆರಡನ್ನೂ ಸೇರಿಸಿ ಮುಖಕ್ಕೆ ಹಚ್ಚಿ. ಹಾಗೆ 10 ನಿಮಿಷ ಬಿಡಬೇಕು.

ಅಲೋವೆರಾ ನೈಸರ್ಗಿಕವಾಗಿಯೇ ಸೂರ್ಯನ ಪ್ರಖರ ಕಿರಣಗಳಿಂದ ರಕ್ಷಿಸುತ್ತದೆ. ಟೀ ಮರದ ಎಣ್ಣೆ ಕೂಡ ಬಿಸಿಲಿನ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುವ ಶಕ್ತಿ ಹೊಂದಿದೆ. ಬೇಸಿಗೆಯಲ್ಲಿ ದಿನ ಬಿಟ್ಟು ದಿನ ಇದನ್ನು ಟ್ರೈ ಮಾಡಿ.

ಕಡಲೆ ಹಿಟ್ಟು ಹಾಗೂ ಆಲೀವ್‌ ಎಣ್ಣೆ ಮಾಸ್ಕ್‌ :

ಕಡಲೆ ಹಿಟ್ಟಿಗೆ ಆಲೀವ್‌ ಎಣ್ಣೆ ಹಾಕಿ ಕಲಸಿ. ಐದು ನಿಮಿಷ ಹಾಗೆ ಬಿಡಿ. ಬೆಚ್ಚನೆಯ ನೀರಿನಿಂದ ಮುಖ ಒರೆಸಿ.

ಕಡಲೆಹಿಟ್ಟು ಮುಖದ ಕೊಳೆಯನ್ನು ಹೋಗಲಾಡಿಸುವ ಶಕ್ತಿ ಹೊಂದಿದೆ. ಸತ್ತ ಕೋಶಗಳನ್ನು ತೆಗೆದು ಹಾಕಿ ಮಾಯಿಶ್ಚರೈಸ್‌ ಮಾಡುತ್ತದೆ. ವಾರದಲ್ಲಿ ಎರಡು ಬಾರಿ ಇದನ್ನು ಪ್ರಯೋಗಿಸಿ.

ಸೌತೆಕಾಯಿ, ಟೊಮೆಟೊ ಹಾಗೂ ಓಟ್ಸ್‌ ಮಾಸ್ಕ್‌ :

ಎಣ್ಣೆ ಚರ್ಮದವರಿಗೆ ಇದು ಉತ್ತಮ. ಬೆಳಗ್ಗಿನ ಸಮಯದಲ್ಲಿ ಈ ಮಾಸ್ಕ್‌ ಬಳಸುವುದು ಒಳ್ಳೆಯದು. ಸೌತೆಕಾಯಿ, ಟೊಮೆಟೊ ಹಾಗೂ ಓಟ್ಸ್‌ ಬಳಸಿ ಮೆತ್ತಗಾಗುವ ತನಕ ಕಲಕಿ. ಅನಂತರ ಮುಖಕ್ಕೆ ಹಚ್ಚಿ.

ಸೌತೆಕಾಯಿ ಮುಖದ ಮೇಲಿನ ಕಪ್ಪುಚುಕ್ಕೆಗಳನ್ನು ಕಮ್ಮಿ ಮಾಡುತ್ತದೆ. ತಂಪಿನ ಅನುಭವ ಕೂಡ ನೀಡುತ್ತದೆ. ಟೊಮೆಟೊ ಕೂಡ ತ್ವಚೆಯ ಮೇಲೆ ಕುಳಿ ಬೀಳದಂತೆ ತಪ್ಪಿಸುತ್ತದೆ. ಓಟ್ಸ್‌ ತ್ವಚೆಯನ್ನು ಸೌಮ್ಯಗೊಳಿಸುತ್ತದೆ. ಮಾಸ್ಕ್‌ ಬಳಸುವ ಮುನ್ನ ಮುಖವನ್ನು ಶುದ್ಧ ಮಾಡಿಕೊಳ್ಳಿ. ಮಾಸ್ಕ್‌ ಬಳಸಿದ ನಂತರ ತ್ವಚೆಯನ್ನು ರಕ್ಷಿಸುವ ಕ್ರೀಂ ಬಳಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...