ಕೊರೊನಾದಿಂದ ರಕ್ಷಣೆ ಪಡೆಯಲು ದೇಶದ ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಇದ್ರಿಂದಾಗಿ ವರ್ಕ್ ಫ್ರಂ ಹೋಮ್ ಮಾಡುವವರ ಸಂಖ್ಯೆ ಹೆಚ್ಚಿದೆ. ಮನೆಯಲ್ಲಿ ಕೆಲಸ ಮಾಡುವುದ್ರಿಂದ ಒತ್ತಡ ಹೆಚ್ಚು. ಮನೆ ಕೆಲಸ ಹಾಗೂ ಕಚೇರಿ ಕೆಲಸ ಎರಡನ್ನೂ ಒಟ್ಟಿಗೆ ನಿಭಾಯಿಸುವುದ್ರಿಂದ ತಮ್ಮ ಆರೋಗ್ಯ, ಸೌಂದರ್ಯದ ಬಗ್ಗೆ ಗಮನ ನೀಡಲು ಸಾಧ್ಯವಾಗ್ತಿಲ್ಲ.
ಕೆಲಸದ ಮಧ್ಯೆ ಇವೆರಡಕ್ಕೂ ನೀವು ಗಮನ ನೀಡಬೇಕು. ಲಾಕ್ ಡೌನ್ ಸಂದರ್ಭದಲ್ಲಿ ಮಹಿಳೆಯರು ಕೂದಲಿನ ರಕ್ಷಣೆಗೂ ಸಮಯ ಹೊಂದಿಸಿಕೊಳ್ಳಬೇಕು.
ಕೂದಲಿಗೆ ಎಣ್ಣೆ ಮಸಾಜ್ ಮಾಡುವುದು ಬಹಳ ಮುಖ್ಯ. ಇದು ಕೂದಲನ್ನು ಬೇರುಗಳಿಗಿಂತ ಗಟ್ಟಿ ಮಾಡುತ್ತದೆ. ಕೂದಲು ಸುಂದರವಾಗಿ, ದಟ್ಟವಾಗಿ, ಉದ್ದವಾಗಿ, ಮೃದುವಾಗಿ ಕಾಣಲು ನೆರವಾಗುತ್ತದೆ. ಕೂದಲು ಉದುರುವುದು ಮತ್ತು ಶುಷ್ಕತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಬಾದಾಮಿ ಎಣ್ಣೆ, ತೆಂಗಿನ ಎಣ್ಣೆ ಸೇರಿದಂತೆ ನೈಸರ್ಗಿಕ ಎಣ್ಣೆಯನ್ನು ಬಳಸಬಹುದು. ವಾರದಲ್ಲಿ ಎರಡು ದಿನ ಕೂದಲಿಗೆ ಮಸಾಜ್ ಮಾಡುವುದು ಒಳ್ಳೆಯದು.
ಕೂದಲಿನ ಆರೋಗ್ಯಕ್ಕೆ ಬಿಸಿ ಟವೆಲ್ ಮಸಾಜ್ ಒಳ್ಳೆಯದು. ಬೆಚ್ಚಗಿನ ನೀರಿನಲ್ಲಿ ಶುದ್ಧ ಟವೆಲ್ ಅದ್ದಿ ಹಿಂಡಿರಿ. ನಂತ್ರ ಅದನ್ನು ತಲೆಗೆ ಕಟ್ಟಿಕೊಳ್ಳಿ. 8-10 ನಿಮಿಷಗಳ ನಂತ್ರ ಶುದ್ಧ ನೀರಿನಿಂದ ತೊಳೆಯಿರಿ.
ಹೇರ್ ಮಾಸ್ಕ್ ಕೂಡ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಇದು ಕೂದಲು ಉದುರುವ ಸಮಸ್ಯೆ ಕಡಿಮೆ ಮಾಡಿ, ದಟ್ಟವಾದ ಕೂದಲು ಬೆಳೆಯಲು ನೆರವಾಗುತ್ತದೆ. ನೈಸರ್ಗಿಕ ಹೇರ್ ಮಾಸ್ಕ್ ಗೆ ಆದ್ಯತೆ ನೀಡಿ.
ಶಾಂಪೂದಲ್ಲಿ ರಾಸಾಯನಿಕವಿರುತ್ತದೆ. ಅವು ಕೂದಲನ್ನು ಶುಷ್ಕಗೊಳಿಸುತ್ತವೆ. ಹಾಗಾಗಿ ವಾರದಲ್ಲಿ ಎರಡು ಬಾರಿ ಮಾತ್ರ ಶಾಂಪೂ ಬಳಸಿ. ರಾಸಾಯನಿಕ ಪದಾರ್ಥ ಕಡಿಮೆಯಿರುವ ಶಾಂಪೂ ಬಳಸುವುದು ಉತ್ತಮ.