ಆಕರ್ಷಕ ಹಲ್ಲುಗಳನ್ನು ಪಡೆಯುವ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ. ಕೇವಲ ದಿನಕ್ಕೆರಡು ಬಾರಿ ಬ್ರಶ್ ಮಾಡುವುದರಿಂದ ಇದು ಸಾಧ್ಯವಾಗದೆ ಹೋಗಬಹುದು, ಹಾಗಿದ್ದೂ ಕೆಲವು ಟಿಪ್ಸ್ ಗಳನ್ನು ಅನುಸರಿಸಿದರೆ ಸಾಕು ನಿಮ್ಮ ಹಲ್ಲುಗಳು ಹೊಳೆಯುವುದು ನಿಶ್ಚಿತ.
ಬಾಳೆಹಣ್ಣಿನ ಸಿಪ್ಪೆಯನ್ನು ನಿಮ್ಮ ಹಲ್ಲುಗಳ ಮೇಲೆ ತಿಕ್ಕಿ. ಎರಡು ನಿಮಿಷ ಹೀಗೆ ಮಾಡುವುದರಿಂದ ನಿಮ್ಮ ಹಲ್ಲು ಪೊಟ್ಯಾಶಿಯಂ, ಮ್ಯಾಂಗನೀಸ್ ಮತ್ತು ಮೆಗ್ನೀಸಿಯಂಗಳನ್ನು ಹೀರಿ, ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ.
ಸ್ಟ್ರಾಬೆರಿ ಹಣ್ಣಿನ ಪೇಸ್ಟ್ ತಯಾರಿಸಿ ಅದನ್ನು ನಿಮ್ಮ ಹಲ್ಲುಗಳ ಮೇಲೆ ಹಚ್ಚಿ. ಬಳಿಕ ಹಲ್ಲನ್ನು ಸ್ವಚ್ಛವಾಗಿ ತೊಳೆಯಿರಿ. ಅಥವಾ ಬಳಿಕ ಹಲ್ಲುಜ್ಜಿ. ಇದರಿಂದಲೂ ನಿಮ್ಮ ಹಲ್ಲು ಹೊಳಪು ಪಡೆಯುತ್ತದೆ. ಇವು ಬ್ಯಾಕ್ಟೀರಿಯಾವನ್ನು ತೊಡೆದು ಹಾಕಿ ಹಲ್ಲನ್ನು ಸ್ವಚ್ಛಗೊಳಿಸುತ್ತದೆ.
ಹಸಿ ಕ್ಯಾರೆಟ್ ತಿನ್ನುವಾಗ ಚೆನ್ನಾಗಿ ತೊಳೆದುಕೊಳ್ಳಲು ಮರೆಯದಿರಿ. ಇದರಿಂದ ನಿಮ್ಮ ಹಲ್ಲುಗಳ ಪ್ಲೇಕ್ ದೂರವಾಗಿ ನೈಸರ್ಗಿಕ ಹೊಳಪು ನಿಮ್ಮದಾಗುತ್ತದೆ. ಹಸಿ ಕ್ಯಾರೆಟ್ ತುಂಡುಗಳನ್ನು ಹಲ್ಲುಗಳ ಮೇಲೆ ಉಜ್ಜುವುದರಿಂದಲೂ ಇದೇ ಪರಿಣಾಮವನ್ನು ಪಡೆಯಬಹುದು.