alex Certify ಫಳ ಫಳ ಹೊಳೆಯುವ ಹಲ್ಲು ನಿಮ್ಮದಾಗಬೇಕಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಳ ಫಳ ಹೊಳೆಯುವ ಹಲ್ಲು ನಿಮ್ಮದಾಗಬೇಕಾ….?

ಹಲ್ಲು ಕೂಡ ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಸುಂದರ, ಹೊಳೆಯುವ ಹಲ್ಲು ಮುಂದಿರುವವರನ್ನು ಆಕರ್ಷಿಸುತ್ತದೆ. ಆದ್ರೆ ಕೆಲವರ ಹಲ್ಲು ಬಿಳಿ ಬದಲು ಹಳದಿ ಬಣ್ಣದಲ್ಲಿರುತ್ತದೆ. ಎಲ್ಲರೆದುರು ಹಳದಿ ಬಣ್ಣದ ಹಲ್ಲುಳ್ಳವರು ನಗಲು ಹಿಂದೇಟು ಹಾಕ್ತಾರೆ. ಜನರ ಮುಂದೆ ತಮಾಷೆ ವಸ್ತುವಾಗದಿರಲಿ ಎಂಬುದು ಅವ್ರ ಉದ್ದೇಶ. ಹಳದಿ ಹಲ್ಲನ್ನು ಬಿಳಿ ಹಲ್ಲು ಮಾಡಬಹುದು.

ಹಳದಿ ಬಣ್ಣದ ಹಲ್ಲು ನಿಮ್ಮದಾಗಿದ್ದು,ಹಲ್ಲನ್ನು ಹುಳ ತಿನ್ನಲು ಶುರು ಮಾಡಿದ್ದರೆ ಚಿಂತೆ ಕಾಡುವುದು ಸಾಮಾನ್ಯ. ನೀವು ಇಂಥವರಲ್ಲಿ ಒಬ್ಬರಾಗಿದ್ದರೆ ಹಲ್ಲನ್ನು ನಿಂಬೆ ರಸ ಹಾಗೂ ಉಪ್ಪಿನಿಂದ ಸ್ವಚ್ಛಗೊಳಿಸಿ. ನಿಂಬೆ ರಸಕ್ಕೆ ಉಪ್ಪು ಹಾಗೂ ಸಾಸಿವೆ ಎಣ್ಣೆಯನ್ನು ಹಾಕಿ ಸ್ವಚ್ಛಗೊಳಿಸಿ. ದಿನದಲ್ಲಿ 2 ಬಾರಿ ಹೀಗೆ ಮಾಡಿ. ನಾಲ್ಕೈದು ದಿನಗಳಲ್ಲಿ ನಿಮಗೆ ಫಲಿತಾಂಶ ಸಿಗುತ್ತದೆ.

ಹಲ್ಲನ್ನು ಬಿಳಿಗೊಳಿಸಲು ನೀವು ಇದ್ದಿಲು ಪುಡಿ ಬಳಸಬಹುದು. ಇದ್ದಿಲನ್ನು ಪುಡಿ ಮಾಡಿ ಅದನ್ನು ಹಲ್ಲಿಗೆ ಉಜ್ಜಬೇಕು. ಅನೇಕ ದಿನಗಳ ಕಾಲ ಇದನ್ನು ಬಳಸಬಾರದು.

ಬಾಚಣಿಗೆ ಸ್ವಚ್ಛಗೊಳಿಸುವುದು ಹೇಗೆ…?

ಅಡುಗೆ ಸೋಡಾ ಕೂಡ ನಿಮ್ಮ ಹಲ್ಲನ್ನು ಬಿಳಿ ಮಾಡುತ್ತದೆ. ವಾರದಲ್ಲಿ ಒಂದು ಅಥವಾ ಎರಡು ದಿನ ಪೇಸ್ಟ್ ಗೆ ಅಡುಗೆ ಸೋಡಾ ಹಾಕಿ ಬ್ರೆಷ್ ಮಾಡಿ. ಅಡುಗೆ ಸೋಡಾ ನಿಮ್ಮ ಹಲ್ಲನ್ನು ಸ್ವಚ್ಛಗೊಳಿಸುತ್ತದೆ. ಅಡುಗೆ ಸೋಡಾ ಬಳಸಿದ ನಂತ್ರ ಬೆಚ್ಚಗಿನ ನೀರಿನಲ್ಲಿ ಹಲ್ಲನ್ನು ಸ್ವಚ್ಛಗೊಳಿಸಿ.

ಕಿತ್ತಳೆ ಸಿಪ್ಪೆಕೂಡ ನಿಮ್ಮ ಹಲ್ಲನ್ನು ಬಿಳಿ ಬಣ್ಣಕ್ಕೆ ತರುವಲ್ಲಿ ನೆರವಾಗುತ್ತದೆ. ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಅದನ್ನು ಹಲ್ಲುಜ್ಜಲು ಬಳಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...