ಹೆಚ್ಚಿನ ಜನ ದೇಹ ತೂಕ ಕಡಿಮೆ ಮಾಡಬೇಕೆಂದು ಬಯಸುವವರಾದರೆ, ಮತ್ತೊಂದು ಗುಂಪಿನ ಜನ ದೇಹ ತೂಕ ಹೆಚ್ಚಿಸುವ ಬಗ್ಗೆ ಕನಸು ಕಾಣುತ್ತಿರುತ್ತಾರೆ. ಅವರಿಗಾಗಿ ಒಂದಿಷ್ಟು ಟಿಪ್ಸ್.
ಮೊಟ್ಟೆಯಲ್ಲಿ ಹೆಚ್ಚಿನ ಕ್ಯಾಲೊರಿ, ಪ್ರೋಟಿನ್, ಕೊಬ್ಬಿನಂಶಗಳು ಇರುತ್ತವೆ. ದೇಹದ ತೂಕವನ್ನು ಹೆಚ್ಚು ಮಾಡಿಕೊಳ್ಳಲು ಬಯಸುವವರು ಇದನ್ನು ತಿನ್ನಬೇಕು. ಅದರಲ್ಲೂ ದಿನಕ್ಕೆ ನಾಲ್ಕು ಮೊಟ್ಟೆಯ ಬಿಳಿ ಭಾಗವನ್ನು ತಿನ್ನುವುದರಿಂದ ತೂಕವನ್ನು ಬೇಗ ಹೆಚ್ಚಿಸಿಕೊಳ್ಳಬಹುದು.
ಬಾಳೆಹಣ್ಣಿನಲ್ಲಿ ಕ್ಯಾಲೋರಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಪ್ರತಿ ದಿನ ಬೆಳಿಗ್ಗೆ ಒಂದು ಲೋಟ ಹಾಲು ಮತ್ತು ಒಂದು ಬಾಳೆಹಣ್ಣು ತಿಂದರೆ ಸಾಕು. ದಿನಕ್ಕೆ ಒಂದು ಮಾವಿನಹಣ್ಣಿನಂತೆ ಮೂರು ವಾರ ತಿನ್ನಿ. ಕೂಡಲೇ ಒಂದು ಲೋಟ ಹಾಲು ಕುಡಿಯುವುದರಿಂದ ನಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.
ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೇಟ್ ಗಳು ಹೆಚ್ಚಾಗಿರುತ್ತದೆ. ಇದು ದೇಹದ ತೂಕವನ್ನು ಹೆಚ್ಚಾಗಿಸುವುದಕ್ಕೆ ಸಹಾಯ ಮಾಡುತ್ತದೆ.
5 ಒಣದ್ರಾಕ್ಷಿ, 5 ಅಂಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿಡಬೇಕು. ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಇದನ್ನು ತಿನ್ನಬೇಕು. ಇದರಿಂದ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.