ಕೂದಲ ರಕ್ಷಣೆಗೆ ಮೆಂತ್ಯೆ ಕಾಳನ್ನು ಬಳಸುತ್ತಾರೆ. ಇದರಲ್ಲಿರುವ ಪೋಷಕಾಂಶಗಳು ಕೂದಲಿನ ಸಮಸ್ಯೆಗಳನ್ನು ನಿವಾರಿಸಿ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಹಾಗಾಗಿ ತೆಳ್ಳನೆಯ ಕೂದಲನ್ನು ದಪ್ಪವಾಗಿಸಲು ಮನೆಯಲ್ಲಿಯೇ ಈ ವಿಧಾನದಲ್ಲಿ ಮೆಂತ್ಯೆ ಎಣ್ಣೆಯನ್ನು ತಯಾರಿಸಿ.
2 ಚಮಚ ಮೆಂತ್ಯಕಾಳನ್ನು ಒಣಗಿಸಿ ಪುಡಿ ಮಾಡಿ ಅದನ್ನು ಹರಳೆಣ್ಣೆ ಅಥವಾ ಆಲಿವ್ ಎಣ್ಣೆಯಲ್ಲಿ ಬೆರೆಸಿ ಸೂರ್ಯನ ಬಿಸಿಲಿನಲ್ಲಿ 2-3 ವಾರಗಳ ತನಕ ಇಡಿ. ಇಲ್ಲವಾದರೆ ಮೆಂತ್ಯ ಪುಡಿ ಮತ್ತು ಎಣ್ಣೆಯ ಮಿಶ್ರಣವನ್ನು ಡಬಲ್ ಬಾಯ್ಲಿಂಗ್ ವಿಧಾನದಲ್ಲಿ ಬಿಸಿ ಮಾಡಿ ಗಾಜಿನ ಬಾಟಲಿನಲ್ಲಿ ಸ್ಟೋರ್ ಮಾಡಿ ಇಡಿ.
ʼಮೊಡವೆʼ ಕಲೆಗಳನ್ನು ನಿವಾರಿಸಲು ಈ ಮನೆಮದ್ದು ಬೆಸ್ಟ್
ಈ ಎಣ್ಣೆಯನ್ನು ಕೂದಲು ಮತ್ತು ನೆತ್ತಿಗೆ ಹಚ್ಚಿ 5 ನಿಮಿಷಗಳ ಕಾಲ ಮಸಾಜ್ ಮಾಡಿ. ರಾತ್ರಿಯಿಡಿ ಹಾಗೇ ಬಿಟ್ಟು ಬೆಳಿಗ್ಗೆ ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಮಾಡಿ. ಇದನ್ನು ನಿಯಮಿತವಾಗಿ ಬಳಸಿದರೆ ಕೂದಲುದುರುವ ಸಮಸ್ಯೆ ದೂರವಾಗುತ್ತದೆ.