ಆರೋಗ್ಯವನ್ನು ಕಾಪಾಡಲು ಹಾಗೂ ಸೌಂದರ್ಯವನ್ನು ವೃದ್ದಿಸಿಕೊಳ್ಳಲು ಕೆಲವರು ರಾಸಾಯನಿಕಗಳ ಬದಲು ಅಡುಗೆ ಮನೆಯಲ್ಲಿ ಸಿಗುವ ನೈಸರ್ಗಿಕ ಪದಾರ್ಥಗಳನ್ನು ಬಳಸುತ್ತಾರೆ. ಇದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಆದರೆ ಚಳಿಗಾಲದಲ್ಲಿ ಮಾತ್ರ ಈ ಪದಾರ್ಥಗಳನ್ನು ಮಾತ್ರ ಮುಖಕ್ಕೆ ಬಳಸಬೇಡಿ.
*ಅಕ್ಕಿಹಿಟ್ಟು : ಇದು ಚರ್ಮವನ್ನು ಬಿಗಿಗೊಳಿಸುತ್ತದೆ. ಆದರೆ ಚಳಿಗಾಲದಲ್ಲಿ ಬಳಸಿದರೆ ಇದರಿಂದ ಚರ್ಮ ಸುಕ್ಕುಗಟ್ಟಬಹುದು.
*ಕಡಲೆ ಹಿಟ್ಟು : ಇದು ಚರ್ಮದಲ್ಲಿನ ಎಣ್ಣೆಯಂಶವನ್ನು ಕ್ಲೀನ್ ಮಾಡುತ್ತದೆ. ಹಾಗಾಗಿ ಇದನ್ನು ಚಳಿಗಾಲದಲ್ಲಿ ಬಳಸಿದರೆ ಚರ್ಮ ಮತ್ತಷ್ಟು ಡ್ರೈ ಆಗುತ್ತದೆ.
ತ್ವಚೆಯ ಸೌಂದರ್ಯದ ಗುಟ್ಟು ಇಲ್ಲಿದೆ ಕೇಳಿ
*ಸೌತೆಕಾಯಿ : ಇದು ಕೂಡ ಚರ್ಮದಲ್ಲಿರುವ ಎಣ್ಣೆಯಂಶವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಇದನ್ನು ಚಳಿಗಾಲದಲ್ಲಿ ಬಳಸಿದರೆ ಚರ್ಮಕ್ಕೆ ಹಾನಿಯಾಗಬಹುದು.
*ನಿಂಬೆ : ಇದರಲ್ಲಿರುವ ಆಮ್ಲೀಯತೆ ನಿಮ್ಮ ಚರ್ಮವನ್ನು ಒಣಗಿಸುತ್ತದೆ. ಇದರಿಂದ ಚಳಿಗಾಲದಲ್ಲಿ ಚರ್ಮದ ಸಮಸ್ಯೆ ಕಾಡಬಹುದು.
*ಆಲೂಗಡ್ಡೆ : ಇದು ಚರ್ಮವನ್ನು ಒಣಗಿಸುವ ಗುಣಗಳನ್ನು ಹೊಂದಿದೆ. ಇದನ್ನು ಚಳಿಗಾಲದಲ್ಲಿ ಬಳಸಿದರೆ ಚರ್ಮದ ತುರಿಕೆ, ಉರಿ ಸಮಸ್ಯೆ ಕಾಡಬಹುದು.