ಐಬ್ರೋಗಳು ದಪ್ಪವಾಗಿದ್ದರೆ ಮುಖದ ಅಂದ ಹೆಚ್ಚಾಗುತ್ತದೆ. ಆದರೆ ಕೆಲವರಿಗೆ ಗಾಯವಾಗಿ ಇಲ್ಲವೇ ಥ್ರೆಡ್ಡಿಂಗ್ ನಿಂದಾಗಿ ಕಟ್ ಆಗಿ ಆ ಸ್ಥಳದಲ್ಲಿ ಕೂದಲು ಬೆಳೆಯುವುದಿಲ್ಲ. ಹಾಗಾಗಿ ಅಂತಹ ಸ್ಥಳದಲ್ಲಿ ಕೂದಲು ಮತ್ತೆ ಬೆಳೆಯಲು ಈ ಮನೆಮದ್ದನ್ನು ಹಚ್ಚಿ.
*ಅಲೋವೆರಾ ಜೆಲ್ : ಇದು ಕೂದಲ ಬೆಳವಣಿಗೆಗೆ ಸಹಕಾರಿಯಾಗಿದೆ. ಹಾಗಾಗಿ ಅಲೋವೆರಾ ಎಲೆಗಳಿಂದ ಜೆಲ್ ತೆಗೆದು ಅದನ್ನು ಐಬ್ರೋಸ್ ಮೇಲೆ ಹಚ್ಚಿ ಮಸಾಜ್ ಮಾಡಿ. 30 ನಿಮಿಷ ಬಿಟ್ಟು ಮುಖವನ್ನು ವಾಶ್ ಮಾಡಿ.
ʼಮೊಡವೆʼ ವಾಸಿಯಾಗಲು ಈ ಟಿಪ್ಸ್ ಫಾಲೋ ಮಾಡಿ
*ಈರುಳ್ಳಿ ರಸ : ಇದು ಕೂಡ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿರುವುದರಿಂದ ಈರುಳ್ಳಿ ತುರಿದು ರಸ ತೆಗೆದು ಹುಬ್ಬುಗಳ ಮೇಲೆ ಹಚ್ಚಿ 1 ಗಂಟೆ ಬಿಟ್ಟು ಮುಖವನ್ನು ಸ್ವಚ್ಚಗೊಳಿಸಿ.
*ಟೀ ಟ್ರೀ ಆಯಿಲ್ : ಇದು ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಇದು ಚರ್ಮದ ಮೇಲಿನ ಸತ್ತ ಪದರವನ್ನು ತೆಗೆದು ಹಾಕಿ ಅಲ್ಲಿ ಹೊಸ ಕೂದಲು ಬೆಳೆಯುವಂತೆ ಮಾಡುತ್ತದೆ. ಹಾಗಾಗಿ 5 ಹನಿ ಟೀ ಟ್ರೀ ಆಯಿಲ್ ಗೆ 1 ಚಮಚ ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ ಐಬ್ರೋಸ್ ಮೇಲೆ ಹಚ್ಚಿ ಮಸಾಜ್ ಮಾಡಿ. 30 ನಿಮಿಷ ಬಿಟ್ಟು ಮುಖವನ್ನು ವಾಶ್ ಮಾಡಿ.