ಮಹಿಳೆಯರೇ, ನಿಮ್ಮ ನೆತ್ತಿಯ ಕೂದಲು ತೆಳುವಾಗುತ್ತಿದೆಯೇ, ಪುರುಷರಂತೆ ನಿಮ್ಮ ತಲೆಯೂ ಬೋಳಾಗುತ್ತದೆ ಎಂಬ ಭೀತಿ ಕಾಡುತ್ತಿದೆಯೇ. ಹಾಗಿದ್ದರೆ ಹೀಗೆ ಮಾಡಿ.
ಮೊಟ್ಟೆ ಮತ್ತು ಹಾಲಿನ ಮಾಸ್ಕ್ ನಿಮ್ಮ ಸಮಸ್ಯೆಯನ್ನು ಸುಲಭದಲ್ಲಿ ಪರಿಹರಿಸಬಹುದು. ಮೊದಲು ಮೊಟ್ಟೆಯ ಒಳಭಾಗಕ್ಕೆ ಹಾಲು ಸೇರಿಸಿ ಮಿಕ್ಸ್ ಮಾಡಿ. ಇದಕ್ಕೆ ನಿಂಬೆ ರಸ ಮತ್ತು ನಾಲ್ಕು ಹನಿ ತೆಂಗಿನೆಣ್ಣೆ ಬೆರೆಸಿ. ಈ ಮಿಶ್ರಣವನ್ನು ಕೂದಲಿನ ಬುಡಕ್ಕೆ ಹಚ್ಚಿ. ಇಪ್ಪತ್ತು ನಿಮಿಷ ಬಳಿಕ ತಲೆ ತೊಳೆಯಿರಿ.
ಕಣ್ಣಿನ ʼಹುಬ್ಬುʼ ದಪ್ಪವಾಗಿ ಬೆಳೆಯಲು ಈ ಆಹಾರ ಸೇವಿಸಿ
ಮೊಸರು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ ಎಂಬುದು ಹಲವು ಅಧ್ಯಯನಗಳಿಂದ ದೃಢಪಟ್ಟಿದೆ. ಹಾಗಾಗಿ ಮೊಸರು ಹಾಗೂ ಆಲಿವ್ ಎಣ್ಣೆಯನ್ನು ಜೊತೆ ಸೇರಿಸಿ ಚೆನ್ನಾಗಿ ಕದಡಿ. ಅದಕ್ಕೆ ಜೇನುತುಪ್ಪವನ್ನೂ ಸೇರಿಸಿ ಕೂದಲಿನ ಬುಡಕ್ಕೆ ಹಚ್ಚಿ. ಹದಿನೈದು ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಈರುಳ್ಳಿ ಮತ್ತು ತೆಂಗಿನೆಣ್ಣೆಯ ಹೇರ್ ಮಾಸ್ಕ್ ಅನ್ನು ಇದೇ ವಿಧಾನದಲ್ಲಿ ಮಾಡಿ ಬಳಸಬಹುದು. ಇವೆರಡರಲ್ಲಿರುವ ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳು ಕೂದಲು ಉದುರುವುದನ್ನು ಕಡಿಮೆ ಮಾಡಿ ಉದ್ದ ಬೆಳೆಯುವಂತೆ ಮಾಡುತ್ತದೆ.