alex Certify ಎಣ್ಣೆಯುಕ್ತ ತ್ವಚೆ ನಿಮ್ಮದಾಗಿದ್ದರೆ ಈ ಟಿಪ್ಸ್ ಟ್ರೈ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಣ್ಣೆಯುಕ್ತ ತ್ವಚೆ ನಿಮ್ಮದಾಗಿದ್ದರೆ ಈ ಟಿಪ್ಸ್ ಟ್ರೈ ಮಾಡಿ

ಎಣ್ಣೆಯುಕ್ತ ಚರ್ಮ ಹೊಂದಿರುವವರು ತಮ್ಮ ಚರ್ಮದ ರಕ್ಷಣೆಯನ್ನು ಹೆಚ್ಚಾಗಿ ಮಾಡಬೇಕು. ಯಾಕೆಂದರೆ ಎಣ್ಣೆಯುಕ್ತ ಚರ್ಮದಲ್ಲಿ ಯಾವಾಗಲೂ ಎಣ್ಣೆಯಂಶ ಕಂಡುಬರುವುದರಿಂದ ಧೂಳು, ಕೊಳೆ ಅಂಟಿಕೊಳ್ಳುತ್ತದೆ. ಇದರಿಂದ ಮುಖದಲ್ಲಿ ಮೊಡವೆಗಳು, ಗುಳ್ಳೆಗಳು ಮೂಡುತ್ತವೆ. ಹಾಗಾಗಿ ಎಣ್ಣೆಯುಕ್ತ ತ್ವಚೆಯನ್ನು ಕಾಪಾಡಲು ಈ ಸಲಹೆಯನ್ನು ಪಾಲಿಸಿ.

* ಎಣ್ಣೆಯುಕ್ತ ಚರ್ಮ ಹೊಂದಿರುವವರು ಕರಿದ ಆಹಾರಗಳಿಂದ ದೂರವಿರಿ. ವಿಟಮಿನ್ ಸಿ ಆಹಾರವನ್ನು ಹೆಚ್ಚಾಗಿ ಸೇವಿಸಿ. ಇದು ಮೊಡವೆಗಳ ಸಮಸ್ಯೆಯನ್ನು ನಿವಾರಿಸುತ್ತದೆ. ಹಾಗೇ ವಿಟಮಿನ್ ಇ ಯನ್ನು ಹೆಚ್ಚು ಸೇವಿಸಿ. ಇದು ಚರ್ಮದ ತೇವಾಂಶವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

*ನೀವು ಚರ್ಮವನ್ನು ಹೈಡ್ರೇಟ್ ಮಾಡಿ. ಅದಕ್ಕಾಗಿ ಸಾಕಷ್ಟು ನೀರನ್ನು ಕುಡಿಯಿರಿ. ಇದರಿಂದ ಚರ್ಮ ಹೆಚ್ಚು ತೈಲ ಉತ್ಪತ್ತಿ ಮಾಡುವುದನ್ನು ನಿಲ್ಲಿಸುತ್ತದೆ.

ʼಹಾಗಲಕಾಯಿʼ ಸೌಂದರ್ಯ ರಕ್ಷಣೆಗೂ ಸಹಕಾರಿ

*ನೀವು ನಿದ್ರೆ ಮಾಡಿ ಎದ್ದಾಗ, ಮಲಗುವಾಗ ಮುಖವನ್ನು ವಾಶ್ ಮಾಡಿ. ಪ್ರತಿದಿನ 2 ಬಾರಿಯಾದರೂ ಮುಖವನ್ನು ತೊಳೆಯಿರಿ.

*ಆಗಾಗ ಎಣ್ಣೆಯುಕ್ತ ಚರ್ಮದ ರಕ್ಷಣೆಗಾಗಿ ಫೇಸ್ ಪ್ಯಾಕ್ ನ್ನು ಹಚ್ಚಿ. ಇದು ಎಣ್ಣೆಯಂಶವನ್ನು ಹೀರಿಕೊಂಡು ಚರ್ಮದ ಸಮಸ್ಯೆಯನ್ನು ದೂರ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...