ಕಡಲ ತೀರದಲ್ಲಿ ಮಸ್ತಿ ಮಾಡುವುದು ಎಂದರೆ ಎಲ್ಲರಿಗೂ ಇಷ್ಟ. ಆದರೆ ಯಾರೂ ಕೂಡ ತಮ್ಮ ತ್ವಚೆಯ ಮೇಲೆ ಗಮನ ಹರಿಸುವುದಿಲ್ಲ. ಇದರಿಂದ ತ್ವಚೆ ತನ್ನ ಹೊಳಪು ಕಳೆದುಕೊಳ್ಳುತ್ತದೆ. ಹೀಗಾಗಿ ಬೀಚ್ ಗೆ ಹೋಗುವ ಮೊದಲು ಏನೇನು ಕೇರ್ ತೆಗೆದುಕೊಳ್ಳಬೇಕು ಅನ್ನುವ ಮಾಹಿತಿ ಇಲ್ಲಿದೆ.
* ಸೂರ್ಯನ ನೇರ ಕಿರಣಗಳಿಂದ ಚರ್ಮಕ್ಕೆ ಉಂಟಾಗುವ ಹಾನಿ ತಡೆಯಲು ಗುಣಮಟ್ಟದ ಸನ್ ಸ್ಕ್ರೀನ್ ಲೋಷನ್ ಬಳಸಬೇಕು. ಕೆಲವೊಂದು ಗುಣಮಟ್ಟದ ಸನ್ ಸ್ಕ್ರೀನ್ ಲೋಶನ್ ಹೆಚ್ಚು ಹೊತ್ತು ತನ್ನ ರಕ್ಷಣೆಯ ಅಂಶವನ್ನು ಉಳಿಸಿಕೊಂಡಿರುತ್ತದೆ. ಇಲ್ಲವಾದಲ್ಲಿ ಪ್ರತಿ 2 ಗಂಟೆಗೊಮ್ಮೆಯಾದರೂ ಸನ್ ಸ್ಕ್ರೀನ್ ಲೋಶನ್ ಹಚ್ಚಿಕೊಳ್ಳಲು ಮರೆಯದಿರಿ.
* ಕಡಲ ತೀರಕ್ಕೆ ಹೋಗುವಾಗ ಹ್ಯಾಟ್ ಬಳಸಬೇಕು.
* ಸೀ ವಾಟರ್ ನಲ್ಲಿ ಉಪ್ಪು ಇರುವುದರಿಂದ ಕೂದಲಿಗೆ ಒಳ್ಳೆಯದಲ್ಲ. ಕೂದಲು ಡ್ರೈ ಆಗುತ್ತದೆ. ಹೀಗಾಗಿ ಸ್ವಿಮಿಂಗ್ ಕ್ಯಾಪ್ ಬಳಸಬೇಕು.
* ನೀರಾಟ ಆಡುವುದಾದರೆ ಕಾಟನ್ ಬಟ್ಟೆಗಳಿಗಿಂತ ಸಿಂಥೆಟಿಕ್ ಬಟ್ಟೆಗಳನ್ನು ಬಳಸಬೇಕು. ಇಲ್ಲವೇ ಸ್ವಿಮ್ಮಿಂಗ್ ಸೂಟ್ ಒಳ್ಳೆಯದು.
* ಶೂ ಹಾಕಿಕೊಂಡು ಹೋಗುವುದು ಒಳ್ಳೆಯದಲ್ಲ.
* ಕ್ಲೆನ್ಸರ್, ಟೋನರ್, ಮಾಯಿಶ್ಚರೈಸರ್ ಬಳಕೆ ಮಾಡಬೇಕು. ಬೇಸಿಗೆ ಕಾಲದಲ್ಲಿ ಆಯಿಲ್ ಫ್ರೀ ಮಾಯಿಶ್ಚರೈಸರ್ ಬಳಕೆ ಮಾಡಬೇಕು. ಕ್ಲೆನ್ಸರ್ ಬಳಕೆಯಿಂದ ಚರ್ಮದಲ್ಲಿರುವ ಆಯಿಲ್ ತೆಗೆದು ತೇವಾಂಶವನ್ನಷ್ಟೇ ಉಳಿಸುತ್ತದೆ. ತುಂಬಾ ಡ್ರೈ ಸ್ಕಿನ್ ಆಗಿದ್ದರೆ ಮಾಮೂಲಿ ಬಳಕೆಯ ಸೌಂದರ್ಯ ಉತ್ಪನ್ನಗಳನ್ನೇ ಬಳಸಿ.
* ವಾಟರ್ ಪ್ರೂಫ್ ಮೇಕಪ್ ಇರಲಿ. ಹಾಗೆ ಮೇಕಪ್ ಸಿಂಪಲ್ ಮತ್ತು ಲೈಟ್ ಆಗಿರಲಿ. ಯಾಕೆಂದರೆ ನೀರಿನಲ್ಲಿ ಆಟ ಆಡುವುದರಿಂದ ಮುಖವೆಲ್ಲಾ ಮೇಕಪ್ ಹರಡಿಕೊಂಡು ಅಸಹ್ಯವಾಗಿ ಕಾಣಬಹುದು.