HomeSpecialಜೀವನ ಸುಂದರ ಆದ್ರೆ ವ್ಯರ್ಥ ಮಾಡಿಕೊಳ್ಳದೆ ಇದನ್ನು ಅನುಸರಿಸಿ ಸರಿ ದಾರಿ ರೂಪಿಸಿಕೊಳ್ಳಿ

ಜೀವನ ಸುಂದರ ಆದ್ರೆ ವ್ಯರ್ಥ ಮಾಡಿಕೊಳ್ಳದೆ ಇದನ್ನು ಅನುಸರಿಸಿ ಸರಿ ದಾರಿ ರೂಪಿಸಿಕೊಳ್ಳಿ

ಜೀವನ ಎಂಬುದು ಸುಂದರವಾದ ಉಡುಗೊರೆ. ಅದನ್ನು ಅನ್ಯ ಕಾರಣಕ್ಕೆ ವ್ಯರ್ಥ ಮಾಡಿಕೊಳ್ಳುವವರೇ ಜಾಸ್ತಿ. ವ್ಯರ್ಥಾಲಾಪದಲ್ಲಿ ಬದುಕನ್ನು ಹಾಳು ಮಾಡಿಕೊಳ್ಳದೇ ಒಮ್ಮೆ ಯೋಚಿಸಿ.

ನಿಮಗೆ ಇಷ್ಟವಾದಂತೆ ನಿಮ್ಮ ಜೀವನವನ್ನು ರೂಪಿಸಿಕೊಳ್ಳಲು ನಿಮ್ಮಲ್ಲಿಯೇ ಅವಕಾಶಗಳಿವೆ. ಅವುಗಳನ್ನು ಅನುಸರಿಸಲು ಮುಂದಾಗಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನೊಬ್ಬರೊಂದಿಗೆ ವಿನಾಕಾರಣ ವಾಗ್ವಾದಕ್ಕೆ ಇಳಿಯಬೇಡಿ. ಕೆಲವರಿಗೆ ಮಾತನಾಡಲು ಬರುವುದೇ ಇಲ್ಲ ಎಂಬುದನ್ನು ತಿಳಿಯಿರಿ.

ಊಟ, ತಿಂಡಿ ಸರಿ ಇಲ್ಲ ಎಂದು ದೂರುವುದನ್ನು ಬಿಡಿ. ಇರುವುದನ್ನೇ ತಿನ್ನಲು ಮುಂದಾಗಿ. ಅನೇಕರಿಗೆ ಒಂದು ಹೊತ್ತಿನ ಊಟವೂ ಸಿಗುತ್ತಿಲ್ಲ ಎಂಬುದು ನಿಮಗೆ ನೆನಪಿರಲಿ.

ಮಕ್ಕಳ ಬಗ್ಗೆ ಕೋಪ ಮಾಡಿಕೊಳ್ಳಬೇಡಿ. ಅವರೊಂದಿಗೆ ಕೆಲ ಸಮಯವನ್ನು ಕಳೆಯಿರಿ. ಇನ್ನು ನೀವು ಮಾಡುವ ಕೆಲಸದ ಬಗ್ಗೆ ಎಂದಿಗೂ ತಾತ್ಸಾರ ಮಾಡಬೇಡಿ. ಅನೇಕರಿಗೆ ಕೆಲಸವೇ ಸಿಗುವುದಿಲ್ಲ. ನಿಮಗೆ ಸಿಕ್ಕ ಕೆಲಸವನ್ನು ತೃಪ್ತಿಯಿಂದ ಮಾಡಿರಿ ಎನ್ನುವುದು ಅನುಭವಿಗಳ ಮಾತಾಗಿದೆ.

ಕಷ್ಟವಾಯಿತೆಂದು ಬೇಸರಪಟ್ಟುಕೊಳ್ಳಬೇಡಿ. ಕಷ್ಟವನ್ನು ಧೈರ್ಯವಾಗಿ ಎದುರಿಸಿ. ಜೀವನವನ್ನು ಶಪಿಸದೇ ಎಲ್ಲವನ್ನು ಸಮರ್ಥವಾಗಿ ನಿಭಾಯಿಸುವುದನ್ನು ಕಲಿಯಿರಿ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular