HomeRecipiesಮಕ್ಕಳು ಇಷ್ಟಪಟ್ಟು ತಿನ್ನುವ ರುಚಿಕರವಾದ ‘ಕೊಕೊನಟ್ ಹಲ್ವಾ’

ಮಕ್ಕಳು ಇಷ್ಟಪಟ್ಟು ತಿನ್ನುವ ರುಚಿಕರವಾದ ‘ಕೊಕೊನಟ್ ಹಲ್ವಾ’

ಹಲ್ವಾ ಎಂದರೆ ಬಾಯಲ್ಲಿ ನೀರು ಬರುತ್ತದೆಯೇ…? ಹಾಗಾದ್ರೆ ಇಲ್ಲಿದೆ ನೋಡಿ ಒಂದು ರುಚಿಕರವಾದ ಕೊಕೊನಟ್ ಹಲ್ವಾ ಮಾಡುವ ವಿಧಾನ. ಮಕ್ಕಳಿಗಂತೂ ಇದು ತುಂಬ ಇಷ್ಟವಾಗುತ್ತೆ.

ಬೇಕಾಗುವ ಸಾಮಗ್ರಿಗಳು:

1 ¼ ಕಪ್ – ತೆಂಗಿನಕಾಯಿ ಹಾಲು, 2/3 ಕಪ್ – ಹಾಲು, 2/3 ಕಪ್ – ಸಕ್ಕರೆ, ¼ ಕಪ್ – ತೆಂಗಿನಕಾಯಿ ತುರಿ, 2 ಟೇಬಲ್ ಸ್ಪೂನ್ – ಬೆಣ್ಣೆ, 2 ಟೇಬಲ್ ಸ್ಪೂನ್ – ಬಾದಾಮಿ, 2 ಟೇಬಲ್ ಸ್ಪೂನ್ – ಪಿಸ್ತಾ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ:

ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಹಾಲು ಹಾಕಿ ಹದ ಉರಿಯಲ್ಲಿ ಕುದಿಸಿಕೊಳ್ಳಿ. ನಂತರ ಇದಕ್ಕೆ ಸಕ್ಕರೆ ಹಾಗೂ ತೆಂಗಿನಕಾಯಿ ತುರಿ ಸೇರಿಸಿ ಈ ಮಿಶ್ರಣ ದಪ್ಪಗಾಗುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಬೆಣ್ಣೆ ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ.

ಒಂದು ಪ್ಲೇಟ್ ಗೆ ತುಸು ತುಪ್ಪ ಸವರಿ ಈ ಮಿಶ್ರಣವನ್ನು ಹಾಕಿ ಇದರ ಮೇಲೆ ಬಾದಾಮಿ ಹಾಗೂ ಪಿಸ್ತಾ ಚೂರುಗಳನ್ನು ಹಾಕಿ ಸಮತಟ್ಟು ಮಾಡಿಕೊಳ್ಳಿ. ಇದು ತುಸು ಬಿಸಿ ಇರುವಾಗಲೇ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ.

For Latest News Updates, Join Our Whatsapp Community🚩
RELATED ARTICLES

Most Popular