ಕೊಪ್ಪಳ: ವಾದ ಮಂಡ್ಸುತ್ತಿದ್ದಾಗಲೇ ಕುಸುದು ಬಿದ್ದು ವಕೀಲರಿಬ್ಬರು ಹೃದಯಾಘತದಿಂದ ಸಾವನ್ನಪ್ಪಿರುವ ಘೋರ ಗಹ್ಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಸೀನಿಯರ್ ಸಿವಿಲ್ ಕೋರ್ಟ್ ನಲ್ಲಿ ಈ ಘಟನೆ ನಡೆದಿದೆ. ಕೋರ್ಟ್ ಹಾಲ್ ನಲ್ಲಿಯೇ ಕುಸಿದು ಬಿದ್ದ ವಕೀಲ ನಿಂಗಪ್ಪ ಸುದ್ದಿ (೪೮) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಕೋರ್ಟ್ ಹಾಲ್ ನಲ್ಲಿ ಕುಸಿದು ಬಿದ್ದ ನಿಂಗಪ್ಪ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಮೃತ ವಕೀಲ ನಿಂಗಪ್ಪ, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಗ್ರಾಮದ ನಿವಾಸಿ. ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

