HomeIPL 2026IPL 2026: 'ಆತನ ಆಟವನ್ನು ನೋಡುತ್ತಾ ಬೆಳೆದವನು ನಾನು'; ಹೆಲಿಕಾಪ್ಟರ್ ಶಾಟ್ ಹೊಡೆದು ಪಂದ್ಯ ಗೆಲ್ಲಿಸಿದ...

IPL 2026: ‘ಆತನ ಆಟವನ್ನು ನೋಡುತ್ತಾ ಬೆಳೆದವನು ನಾನು’; ಹೆಲಿಕಾಪ್ಟರ್ ಶಾಟ್ ಹೊಡೆದು ಪಂದ್ಯ ಗೆಲ್ಲಿಸಿದ ಮುಕುಲ್‌ಗೆ ಈತ ಫೇವರಿಟ್

ನಿನ್ನೆ ( ಏಪ್ರಿಲ್ 9 ) ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಲೀಗ್ ಹಂತದ 15ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 3 ವಿಕೆಟ್‌ಗಳ ರೋಚಕ ಗೆಲುವನ್ನು ಕಂಡಿತು.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿ ಗೆಲುವಿನ ನಗೆ ಬೀರಿತು.

ಗುರಿ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ಪರ ಆಯುಷ್ ಬದೋನಿ ಅರ್ಧಶತಕ ಬಾರಿಸಿದರಾದರೂ ತಂಡವನ್ನು ಗೆಲುವಿನ ಸನಿಹ ಕೊಂಡೊಯ್ಯುವಲ್ಲಿ ಯಶಸ್ವಿಯಾಗಲಿಲ್ಲ. ಲಕ್ನೋ ಸೂಪರ್ ಜೈಂಟ್ಸ್ 15 ಓವರ್‌ಗಳಲ್ಲಿ ತನ್ನ ಬ್ಯಾಟ್ಸ್‌ಮನ್‌ಗಳ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮುಕುಲ್ ತಂಡದ ಪರ ಇದ್ದ ಕೊನೆಯ ಬ್ಯಾಟ್ಸ್‌ಮನ್ ಆಗಿದ್ದರು. ಕೊನೆಯ 30 ಎಸೆತಕ್ಕೆ 55 ರನ್ ಬೇಕಿತ್ತು. ಬೌಲರ್‌ಗಳ ಜತೆ ಸೇರಿ ಸ್ಟ್ರೈಕ್ ಕಾಯ್ದುಕೊಳ್ಳುತ್ತಾ ಸಂಪೂರ್ಣ ಜವಾಬ್ದಾರಿ ಹೊತ್ತ ಮುಕುಲ್ ಕೊನೆಯ 12 ಎಸೆತಗಳಲ್ಲಿ ಗೆಲ್ಲಲು 30 ರನ್ ಬೇಕಿದ್ದಾಗ ಕ್ಯಾಮೆರಾನ್ ಗ್ರೀನ್ ಎಸೆದ 19ನೇ ಓವರ್‌ನಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿದ ಮುಕುಲ್ 6 ಎಸೆತಕ್ಕೆ 14 ರನ್ ಬಾರಿಸಬೇಕಾದ ಹಂತಕ್ಕೆ ಪಂದ್ಯವನ್ನು ತಂದರು. ವೈಭವ್ ಅರೋರಾ ಎಸೆದ ಕೊನೆಯ ಓವರ್‌ನ ಮೊದಲ ಎಸೆತಕ್ಕೆ ಆವೇಶ್ ಖಾನ್ ಸಿಂಗಲ್ ತೆಗೆದುಕೊಂಡರೆ, ಎರಡನೇ ಎಸೆತಕ್ಕೆ ಮುಕುಲ್ ಸಿಕ್ಸರ್ ಬಾರಿಸಿದರು. ಅಲ್ಲಿಗೆ ಕೊನೆಯ 4 ಎಸೆತಗಳಲ್ಲಿ 7 ರನ್ ಬೇಕಿತ್ತು. ಮೂರನೇ ಮತ್ತು ನಾಲ್ಕನೇ ಎಸೆತದಲ್ಲಿ ಯಾವುದೇ ರನ್ ಬಾರದ ಕಾರಣ ಲಕ್ನೋ ಗೆಲ್ಲಲು ಕೊನೆಯ ಎರಡು ಎಸೆತಗಳಲ್ಲಿ 7 ರನ್ ಬಾರಿಸಬೇಕಿತ್ತು. ಐದನೇ ಎಸೆತವನ್ನು ಮುಕುಲ್ ಸಿಕ್ಸರ್‌ಗೆ ಅಟ್ಟಿದರು ಹಾಗೂ ಅಲ್ಲಿಗೆ ಪಂದ್ಯ ಡ್ರಾ ಮಟ್ಟ ತಲುಪಿತು. ಕೊನೆಯ ಎಸೆತದಲ್ಲಿ ಒಂದು ರನ್ ಬೇಕಿದ್ದಾಗ ಚೆಂಡು ಬೀಟ್ ಆಗಿ ವಿಕೆಟ್ ಕೀಪರ್ ಕೈ ತಲುಪಿತು. ಈ ವೇಳೆ ಒಂದು ರನ್ ಓಡಿ ಲಕ್ನೋ ಗೆಲುವು ಕಂಡಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಅತ್ಯುತ್ತಮ ಆಟವನ್ನಾಡಿದ ಮುಕುಲ್ ಚೌಧರಿ ಪಂದ್ಯದ ಬಳಿಕ ಮಾತನಾಡಿದ್ದು, ತನ್ನ ನೆಚ್ಚಿನ ಆಟಗಾರ ಯಾರು ಎಂಬುದನ್ನು ತಿಳಿಸಿದ್ದಾರೆ. ‘ನಾನು ಯಾವಾಗಲೂ ಎಂಎಸ್ ಧೋನಿ ಆಟವನ್ನು ನೋಡುತ್ತಿದ್ದೆ. ಏಕೆಂದರೆ ನಾನೊಬ್ಬ ವಿಕೆಟ್ ಕೀಪರ್ ಆಗಿದ್ದೆ. ಹಾಗಾಗಿ ನಾನು ಎಂಎಸ್ ಧೋನಿ ನೋಡುತ್ತಾ ಹಾಗೂ ಅವರ ಹೆಲಿಕಾಪ್ಟರ್ ಶಾಟ್ ನೋಡುತ್ತಾ ಬೆಳೆದೆ. 2011ರ ಏಕದಿನ ವಿಶ್ವಕಪ್ ಯಾವಾಗಲೂ ನನ್ನ ತಲೆಯಲ್ಲಿ ಓಡುತ್ತಾ ಇರುತ್ತದೆ. ನನಗೆ ಪ್ರತಿಯೊಂದೂ ಸಹ ನೆನಪಿದೆ’ ಎಂದು ಹೇಳಿಕೊಂಡಿದ್ದಾರೆ.

ಇನ್ನು ನಿನ್ನೆಯ ಪಂದ್ಯದಲ್ಲಿ ಮುಕುಲ್ ತನ್ನ ನೆಚ್ಚಿನ ಆಟಗಾರ ಧೋನಿಯ ಹಾಗೆ ಹೆಲಿಕಾಪ್ಟರ್ ಶಾಟ್ ಬಾರಿಸಿ ಸಿಕ್ಸರ್ ಚಚ್ಚಿದರು. ಒಂದು ರೀತಿಯಲ್ಲದೇ ವಿಭಿನ್ನ ರೀತಿಯಲ್ಲಿ ಹೆಲಿಕಾಪ್ಟರ್ ಶಾಟ್ ಬಾರಿಸಿ ಗಮನ ಸೆಳೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular