ಬೆಂಗಳೂರು: ದೇಶೀಯ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಲಾವಾ ಯುವಜನತೆ ಹಾಗೂ ಬಜೆಟ್ ಗ್ರಾಹಕರನ್ನು ಗುರಿಯಾಗಿಸಿಕೊಂಡು ತನ್ನ ನೂತನ ವಿರಾಟ್ ಸರಣಿಯ ಎರಡು ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಲಾವಾ ವಿರಾಟ್ ವಿ1 5ಜಿ ಮತ್ತು ಲಾವಾ ವಿರಾಟ್ ವಿ1 ಫೋನ್‌ಗಳು ಜುಲೈ 31 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಹಾಗೂ ಲಾವಾ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಾಗಲಿವೆ.
ವಿದ್ಯಾರ್ಥಿಗಳು, ಗೃಹಿಣಿಯರು ಮತ್ತು ಯುವ ಉದ್ಯೋಗಿಗಳಿಗೆ ಸೂಕ್ತವಾಗುವಂತೆ ವಿನ್ಯಾಸಗೊಳಿಸಲಾಗಿರುವ ಈ ಫೋನ್‌ಗಳ ಮಾರಾಟ ಜುಲೈ 31 ರಂದು ಮಧ್ಯಾಹ್ನ 12:00 ಗಂಟೆಗೆ ಆರಂಭವಾಗಲಿದೆ.
ಆಫರ್ ಬೆಲೆ ಎಷ್ಟು? ಇಲ್ಲಿದೆ ಬಿಡುಗಡೆ ಕೊಡುಗೆ
ಮೊದಲ ದಿನದ ಮಾರಾಟದಲ್ಲಿ (ಜುಲೈ 31) ಗ್ರಾಹಕರು ಭಾರಿ ರಿಯಾಯಿತಿ ಪಡೆಯಬಹುದಾಗಿದ್ದು, ಎರಡನೇ ದಿನದಿಂದ ಬೆಲೆ ಏರಿಕೆಯಾಗಲಿದೆ:
ಲಾವಾ ವಿರಾಟ್ ವಿ1 5ಜಿ : ಮೊದಲ ದಿನದ ಆಫರ್ ಬೆಲೆ ₹11,999. (ಆಗಸ್ಟ್ 1 ರಿಂದ ಬೆಲೆ: ₹12,999).
ಲಾವಾ ವಿರಾಟ್ ವಿ1 : ಮೊದಲ ದಿನದ ಆಫರ್ ಬೆಲೆ ₹8,999. (ಆಗಸ್ಟ್ 1 ರಿಂದ ಬೆಲೆ: ₹9,999).
ಲಾವಾ ವಿರಾಟ್ ವಿ1 5ಜಿ’ ವಿಶೇಷತೆಗಳು :
ಡಿಸ್‌ಪ್ಲೇ & ಬ್ಯಾಟರಿ: 120Hz ರಿಫ್ರೆಶ್ ರೇಟ್ ಹೊಂದಿರುವ 6.75 ಇಂಚಿನ HD+ ಡಿಸ್‌ಪ್ಲೇ ಹಾಗೂ ದೀರ್ಘಕಾಲ ಬಾಳಿಕೆ ಬರುವ 6000mAh ದೈತ್ಯ ಬ್ಯಾಟರಿ.
ಪ್ರೊಸೆಸರ್ & ಸಾಫ್ಟ್‌ವೇರ್: UNISOC T8200 ಪ್ರೊಸೆಸರ್ ಹಾಗೂ ನೂತನ ಆಂಡ್ರಾಯ್ಡ್ 16 ಆಪರೇಟಿಂಗ್ ಸಿಸ್ಟಮ್
ಸ್ಟೋರೇಜ್: 4GB RAM (+4GB ವರ್ಚುವಲ್ RAM) ಮತ್ತು 64GB ಇಂಟರ್ನಲ್ ಸ್ಟೋರೇಜ್.
ಕ್ಯಾಮೆರಾ: 13MP AI ಡ್ಯುಯಲ್ ಹಿನ್ನೆಲೆ ಕ್ಯಾಮೆರಾ ಹಾಗೂ 5MP ಸೆಲ್ಫಿ ಕ್ಯಾಮೆರಾ.
ರಕ್ಷಣೆ & ಬಣ್ಣ: IP64 ಧೂಳು ಮತ್ತು ನೀರು ನಿರೋಧಕ ವ್ಯವಸ್ಥೆ. ‘ಆರ್ಯ ಬ್ಲೂ’ ಮತ್ತು ‘ಸೋನಾರ್ ಗೋಲ್ಡ್’ ಬಣ್ಣಗಳಲ್ಲಿ ಲಭ್ಯ.
ಲಾವಾ ವಿರಾಟ್ ವಿ1 ವಿಶೇಷತೆಗಳು
ಡಿಸ್‌ಪ್ಲೇ & ಬ್ಯಾಟರಿ: 6.75 ಇಂಚಿನ HD+ ಡಿಸ್‌ಪ್ಲೇ ಮತ್ತು 5000mAh ಬ್ಯಾಟರಿ.
ಪ್ರೊಸೆಸರ್ & ಸಾಮರ್ಥ್ಯ: UNISOC SC9863A ಪ್ರೊಸೆಸರ್, 4GB RAM, 64GB ಸ್ಟೋರೇಜ್.
ಕ್ಯಾಮೆರಾ & ರಕ್ಷಣೆ: 13MP ರಿಯರ್, 5MP ಸೆಲ್ಫಿ ಕ್ಯಾಮೆರಾ ಹಾಗೂ IP64 ರೇಟಿಂಗ್.
ಬಣ್ಣಗಳು: ನೀಲಗಿರಿ ಬ್ಲೂ ಮತ್ತು ಹಿಮಾಲಯನ್ ಸಿಲ್ವರ್ ಶೇಡ್‌ಗಳಲ್ಲಿ ಲಭ್ಯ.
ಯಾವುದೇ ಜಾಹೀರಾತು ಕಿರಿಕಿರಿ ಇಲ್ಲ; ಫ್ರೀ ಹೋಮ್ ಸರ್ವೀಸ್ ವರದಾನ
ಈ ಸರಣಿಯ ಅತ್ಯಂತ ದೊಡ್ಡ ಪ್ಲಸ್-ಪಾಯಿಂಟ್ ಎಂದರೆ ಕ್ಲೀನ್ ಆಂಡ್ರಾಯ್ಡ್ ಅನುಭವ. ಅಂದರೆ, ಚೈನೀಸ್ ಫೋನ್‌ಗಳಲ್ಲಿ ಬರುವಂತೆ ಅನಗತ್ಯ ಆ್ಯಪ್‌ಗಳು ಅಥವಾ ಜಾಹೀರಾತುಗಳ ಕಿರಿಕಿರಿ ಇದರಲ್ಲಿ ಇರುವುದಿಲ್ಲ.
ಅಷ್ಟೇ ಅಲ್ಲದೆ, ಫೋನ್‌ನಲ್ಲಿ ಏನಾದರೂ ತಾಂತ್ರಿಕ ದೋಷ ಕಂಡುಬಂದರೆ ಗ್ರಾಹಕರು ಸರ್ವೀಸ್ ಸೆಂಟರ್‌ಗೆ ಅಲೆಯಬೇಕಿಲ್ಲ; ಲಾವಾ ಸಂಸ್ಥೆಯೇ ಉಚಿತವಾಗಿ ಮನೆಬಾಗಿಲಿಗೆ ಬಂದು ಫೋನ್ ರಿಪೇರಿ ಮಾಡಿಕೊಡುವ ಫ್ರೀ ಸರ್ವೀಸ್ ಅಟ್ ಹೋಮ್’ ಸೌಲಭ್ಯವನ್ನು ನೀಡುತ್ತಿದೆ.

