ಕೊರೊನಾ ಕಾರಣದಿಂದ ಆನ್ ಲೈನ್ ಪಾಠ, ಸಭೆಗಳು ಎಲ್ಲೆಡೆ ನಡೆಯುತ್ತಿವೆ. ಹೆಚ್ಚು ಜನ ಜೂಮ್ ಆ್ಯಪ್ ಬಳಸುತ್ತಿದ್ದಾರೆ. ಇದರಿಂದ ಜೂಮ್ ಆ್ಯಪ್ ನಲ್ಲಿ ಈಗ ಇನ್ನಷ್ಟು ಬದಲಾವಣೆಗಳನ್ನು ತರಲಾಗಿದ್ದು, ಫೀಚರ್ಸ್ ಹೆಚ್ಚಿಸಲಾಗಿದೆ.
ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಹಾಗೂ ತರಗತಿ ನಿರ್ವಹಣೆ ಸುಲಭ ಮಾಡಲು ಹೊಸ ಫೀಚರ್ ತಂದಿದೆ. ಬಳಕೆದಾರ ವರ್ಚುವಲ್ ಕ್ಲಾಸ್ ರೂಂನಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಹೊಸ ಫೀಚರ್ ಮೂಲಕ ಮಾಡಬಹುದಾಗಿದೆ ಎಂದು ಜೂಮ್ ತಿಳಿಸಿದೆ.
ಗ್ರೂಪ್ ಗಳು ಎದ್ದು ತೋರುವಂತೆ ಮಾಡಲು ಸ್ಪಾಟ್ ಲೈಟ್ ವ್ಯವಸ್ಥೆ ಮಾಡಬಹುದಾಗಿದೆ. ಶಿಕ್ಷಕರು ಒಮ್ಮೆ ಗ್ರೂಪ್ ವ್ಯೂನಲ್ಲಿ ಒಂಭತ್ತು ವಿದ್ಯಾರ್ಥಿಗಳನ್ನು ಹೈಲೈಟ್ ಮಾಡಿಕೊಂಡು ಲಕ್ಷ್ಯ ವಹಿಸಬಹುದಾಗಿದೆ.
ಅಲ್ಲದೆ, ಮೀಟ್ ನಲ್ಲಿ ಭಾಗವಹಿಸಿದ ವ್ಯಕ್ತಿಯನ್ನು ಎಳೆದು ಬೇರೆಡೆ ಸ್ಥಳದಲ್ಲಿ ಇರಿಸುವ ಅವರನ್ನು ತೆಗೆದು ಹಾಕುವ ಆಪ್ಶನ್ ನ್ನೂ ಕಲ್ಪಿಸಲಾಗಿದೆ. ಗ್ಯಾಲರಿ ಯಾವ ರೀತಿ ಇರಬೇಕು, ಯಾರನ್ನು ಯಾವ ಸ್ಥಾನದಲ್ಲಿ ಇಡಬೇಕು ಎಂಬುದನ್ನು ಶಿಕ್ಷಕರೇ ನಿರ್ಧರಿಸಬಹುದಾಗಿದೆ. ತಮ್ಮ ಗ್ಯಾಲರಿ ಲೇಔಟ್ ಅನ್ನು ಸೇವ್ ಮಾಡಿ ಇಡಬಹುದಾಗಿದೆ. ಅಲ್ಲದೆ, ಒಂಭತ್ತು ಜನರ ವಿಡಿಯೋಗಳು ಎಲ್ಲಿ ಬರಬೇಕು ಎಂಬುದನ್ನು ಪಿನ್ ಮಾಡಿ ಇಡಬಹುದು.
ಇದು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಕಿವಿ ಕೇಳದ ವ್ಯಕ್ತಿಗಳನ್ನು ಸ್ಟಿಕ್ ಮಾಡಿ ಇಡಬಹುದಾಗಿದೆ. ಕೆಲವು ವಿದ್ಯಾರ್ಥಿಗಳನ್ನು ಮ್ಯೂಟ್ ಮಾಡುವ ಅವಕಾಶವನ್ನೂ ಆ್ಯಪ್ ನಲ್ಲಿ ನೀಡಲಾಗಿದೆ. ಮೊಳಗುವ ಧ್ವನಿಯನ್ನು ತೆಗೆದು ನಿಜವಾದ ಧ್ವನಿ ವ್ಯವಸ್ಥೆಯನ್ನು ಎನೇಬಲ್ ಮಾಡುವ ಅವಕಾಶವಿದೆ.
ಧ್ವನಿಯ ಗುಣಮಟ್ಟವನ್ನು 22kHz ನಿಂದ 48 kHz ವರೆಗೆ 96kbps ಮೊನೊನಿಂದ 192kbps ಸ್ಟೀರಿಯೋ ವರೆಗೆ ಏರಿಸುವ ಹಾಗೂ ಇಳಿಸುವ ವ್ಯವಸ್ಥೆಯನ್ನೂ ಇಡಲಾಗಿದೆ.