alex Certify ಜೊಮೆಟೊದಲ್ಲಿ ಪ್ರತಿ ನಿಮಿಷಕ್ಕೆ ಬುಕ್​ ಆಗುತ್ತೆ 22 ಬಿರಿಯಾನಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೊಮೆಟೊದಲ್ಲಿ ಪ್ರತಿ ನಿಮಿಷಕ್ಕೆ ಬುಕ್​ ಆಗುತ್ತೆ 22 ಬಿರಿಯಾನಿ…!

ಆನ್​ಲೈನ್​ ಫುಡ್ ಡೆಲಿವರಿ ಕಂಪನಿ ಜೊಮ್ಯಾಟೋ ಮೀಮ್ಸ್ ಮೂಲಕ ಈ ವರ್ಷ ಭಾರತೀಯರು ಜೊಮೆಟೋದಲ್ಲಿ ಎಷ್ಟು ಫುಡ್​ ಬುಕ್​ ಮಾಡಿದ್ದಾರೆ ಎಂಬ ಮಾಹಿತಿಯನ್ನ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಮೀಮ್ಸ್​ನಲ್ಲಿ ಈ ವರ್ಷದ ಅತ್ಯಂತ ದುಬಾರಿ ಆರ್ಡರ್​, ಕಡಿಮೆ ಆರ್ಡರ್​ ಹಾಗೂ ಎಷ್ಟು ಭಾರಿ ವೆಜ್​ ಬಿರಿಯಾನಿಯನ್ನ ಬುಕ್​ ಮಾಡಲಾಗಿದೆ ಅನ್ನೋ ಎಲ್ಲಾ ಮಾಹಿತಿಯನ್ನ ಹಂಚಿಕೊಳ್ಳಲಾಗಿದೆ.

2020ರಲ್ಲಿ ಜೊಮೆಟೋ ಪ್ರತಿ ನಿಮಿಷಕ್ಕೆ 22 ಬಿರಿಯಾನಿ ಪಾರ್ಸೆಲ್​ಗಳನ್ನ ಡೆಲಿವರಿ ಮಾಡಿದೆಯಂತೆ. ಈ ವರ್ಷದಲ್ಲಿ ಜೊಮೆಟೋ ಬರೋಬ್ಬರಿ 1988044 ವೆಜ್​ ಬಿರಿಯಾನಿಗಳನ್ನ ಡೆಲಿವರಿ ಮಾಡಿದೆ.

ಇನ್ನು ಪಿಜ್ಜಾ ವಿಚಾರಕ್ಕೆ ಬಂದರೆ ಮೇ ತಿಂಗಳಲ್ಲಿ 4.5 ಲಕ್ಷ ಪಿಜ್ಜಾಗಳನ್ನ ಜೊಮೆಟೋ ಡೆಲಿವರಿ ಮಾಡಿದೆ, ಇದು ಜುಲೈ ತಿಂಗಳಲ್ಲಿ 9 ಲಕ್ಷಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್​ನಲ್ಲಿ 12 ಲಕ್ಷ ಹಾಗೂ ನವೆಂಬರ್​ನಲ್ಲಿ 17 ಲಕ್ಷ ತಲುಪಿದೆ.

ಬೆಂಗಳೂರಿನ ಯಶ್​ ಎಂಬವರು 2020ರಲ್ಲಿ ಜೊಮೆಟೋನಲ್ಲಿ ಅತ್ಯಧಿಕ ಅಂದರೆ 1380 ಬಾರಿ ಫುಡ್​ಗಳನ್ನ ಬುಕ್​ ಮಾಡಿದ್ದಾರೆ. ಯಶ್​ ದಿನಕ್ಕೆ ಸರಾಸರಿ 4 ಬಾರಿ ಫುಡ್​ ಬುಕ್​ ಮಾಡುತ್ತಿದ್ದರಂತೆ..!!

ಜೊಮೆಟೋದಲ್ಲಿ ಈವರೆಗೆ ಬುಕ್​ ಮಾಡಿದ ದುಬಾರಿ ಆರ್ಡರ್​ ಹತ್​ ಹತ್ತಿರ 2 ಲಕ್ಷ ರೂಪಾಯಿದ್ದಾಗಿದೆ. ವ್ಯಕ್ತಿಯೊಬ್ಬರು 1,99,950 ರೂಪಾಯಿ ಮೌಲ್ಯದ ಆರ್ಡರ್​ ಬುಕ್​ ಮಾಡಿದ್ದು ಅವರಿಗೆ 66,650 ರೂಪಾಯಿ ರಿಯಾಯಿತಿ ದರದಲ್ಲಿ ದೊರಕಿದೆ.

ಇನ್ನು ಈ ವರ್ಷದ ಕಡಿಮೆ ಆರ್ಡರ್​ 10.01 ರೂಪಾಯಿದ್ದಾಗಿದೆ. 39.99 ರೂಪಾಯಿ ಮೌಲ್ಯದ ಆರ್ಡರ್​​ಗೆ ರಿಯಾಯಿತಿ ದೊರೆತ ಬಳಿಕ 10.01 ರೂಪಾಯಿಯನ್ನ ಗ್ರಾಹಕ ಪಾವತಿಸಿದ್ದಾರೆ.

ಜೊಮೆಟೋ ಈ ಎಲ್ಲ ವಿಚಾರಗಳನ್ನ ಶೇರ್​ ಮಾಡುತ್ತಿದ್ದಂತೆ ಟ್ವೀಟಿಗರು ರೀ ಟ್ವೀಟ್​ ಮೇಲೆ ರೀ ಟ್ವೀಟ್​ ಮಾಡಿದ್ದಾರೆ. ಕಮೆಂಟ್​ ಸೆಕ್ಷನ್​ನಲ್ಲಿ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ.

— zomato (@zomato) December 30, 2020

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...