ಜೊಮೆಟೊದಲ್ಲಿ ಪ್ರತಿ ನಿಮಿಷಕ್ಕೆ ಬುಕ್ ಆಗುತ್ತೆ 22 ಬಿರಿಯಾನಿ…! 01-01-2021 8:47AM IST / No Comments / Posted In: Business, Latest News ಆನ್ಲೈನ್ ಫುಡ್ ಡೆಲಿವರಿ ಕಂಪನಿ ಜೊಮ್ಯಾಟೋ ಮೀಮ್ಸ್ ಮೂಲಕ ಈ ವರ್ಷ ಭಾರತೀಯರು ಜೊಮೆಟೋದಲ್ಲಿ ಎಷ್ಟು ಫುಡ್ ಬುಕ್ ಮಾಡಿದ್ದಾರೆ ಎಂಬ ಮಾಹಿತಿಯನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಮೀಮ್ಸ್ನಲ್ಲಿ ಈ ವರ್ಷದ ಅತ್ಯಂತ ದುಬಾರಿ ಆರ್ಡರ್, ಕಡಿಮೆ ಆರ್ಡರ್ ಹಾಗೂ ಎಷ್ಟು ಭಾರಿ ವೆಜ್ ಬಿರಿಯಾನಿಯನ್ನ ಬುಕ್ ಮಾಡಲಾಗಿದೆ ಅನ್ನೋ ಎಲ್ಲಾ ಮಾಹಿತಿಯನ್ನ ಹಂಚಿಕೊಳ್ಳಲಾಗಿದೆ. 2020ರಲ್ಲಿ ಜೊಮೆಟೋ ಪ್ರತಿ ನಿಮಿಷಕ್ಕೆ 22 ಬಿರಿಯಾನಿ ಪಾರ್ಸೆಲ್ಗಳನ್ನ ಡೆಲಿವರಿ ಮಾಡಿದೆಯಂತೆ. ಈ ವರ್ಷದಲ್ಲಿ ಜೊಮೆಟೋ ಬರೋಬ್ಬರಿ 1988044 ವೆಜ್ ಬಿರಿಯಾನಿಗಳನ್ನ ಡೆಲಿವರಿ ಮಾಡಿದೆ. ಇನ್ನು ಪಿಜ್ಜಾ ವಿಚಾರಕ್ಕೆ ಬಂದರೆ ಮೇ ತಿಂಗಳಲ್ಲಿ 4.5 ಲಕ್ಷ ಪಿಜ್ಜಾಗಳನ್ನ ಜೊಮೆಟೋ ಡೆಲಿವರಿ ಮಾಡಿದೆ, ಇದು ಜುಲೈ ತಿಂಗಳಲ್ಲಿ 9 ಲಕ್ಷಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್ನಲ್ಲಿ 12 ಲಕ್ಷ ಹಾಗೂ ನವೆಂಬರ್ನಲ್ಲಿ 17 ಲಕ್ಷ ತಲುಪಿದೆ. ಬೆಂಗಳೂರಿನ ಯಶ್ ಎಂಬವರು 2020ರಲ್ಲಿ ಜೊಮೆಟೋನಲ್ಲಿ ಅತ್ಯಧಿಕ ಅಂದರೆ 1380 ಬಾರಿ ಫುಡ್ಗಳನ್ನ ಬುಕ್ ಮಾಡಿದ್ದಾರೆ. ಯಶ್ ದಿನಕ್ಕೆ ಸರಾಸರಿ 4 ಬಾರಿ ಫುಡ್ ಬುಕ್ ಮಾಡುತ್ತಿದ್ದರಂತೆ..!! ಜೊಮೆಟೋದಲ್ಲಿ ಈವರೆಗೆ ಬುಕ್ ಮಾಡಿದ ದುಬಾರಿ ಆರ್ಡರ್ ಹತ್ ಹತ್ತಿರ 2 ಲಕ್ಷ ರೂಪಾಯಿದ್ದಾಗಿದೆ. ವ್ಯಕ್ತಿಯೊಬ್ಬರು 1,99,950 ರೂಪಾಯಿ ಮೌಲ್ಯದ ಆರ್ಡರ್ ಬುಕ್ ಮಾಡಿದ್ದು ಅವರಿಗೆ 66,650 ರೂಪಾಯಿ ರಿಯಾಯಿತಿ ದರದಲ್ಲಿ ದೊರಕಿದೆ. ಇನ್ನು ಈ ವರ್ಷದ ಕಡಿಮೆ ಆರ್ಡರ್ 10.01 ರೂಪಾಯಿದ್ದಾಗಿದೆ. 39.99 ರೂಪಾಯಿ ಮೌಲ್ಯದ ಆರ್ಡರ್ಗೆ ರಿಯಾಯಿತಿ ದೊರೆತ ಬಳಿಕ 10.01 ರೂಪಾಯಿಯನ್ನ ಗ್ರಾಹಕ ಪಾವತಿಸಿದ್ದಾರೆ. ಜೊಮೆಟೋ ಈ ಎಲ್ಲ ವಿಚಾರಗಳನ್ನ ಶೇರ್ ಮಾಡುತ್ತಿದ್ದಂತೆ ಟ್ವೀಟಿಗರು ರೀ ಟ್ವೀಟ್ ಮೇಲೆ ರೀ ಟ್ವೀಟ್ ಮಾಡಿದ್ದಾರೆ. ಕಮೆಂಟ್ ಸೆಕ್ಷನ್ನಲ್ಲಿ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. 2020 meme rewind⏪ (and a lil bit about how India ordered this year) pic.twitter.com/84xXSPB5Hh — zomato (@zomato) December 30, 2020 https://twitter.com/SwagGita/status/1344245755708510209