ನವದೆಹಲಿ: ದೇಶದ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದ್ದು, ಇಡೀ ದೇಶವೇ ಕತ್ತಲಲ್ಲಿ ಮುಳುಗುವ ಆತಂಕ ಎದುರಾಗಿದೆ.
ಭಾರತದಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆ ಎದುರಾಗಿದೆ. ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಡಿಮೆ ಪ್ರಮಾಣದ ಕಲ್ಲಿದ್ದಲು ದಾಸ್ತಾನು ಇದೆ. ದೇಶದ 64 ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕಡಿಮೆ ಪ್ರಮಾಣದಲ್ಲಿದ್ದು, 4 ಜನಕ್ಕೆ ಮಾತ್ರ ಸಾಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇದೆ. 25 ವಿದ್ಯುತ್ ಘಟಕಗಳಲ್ಲಿ 7 ದಿನಕ್ಕೆ ಸಾಕಾಗುವಷ್ಟು ಮಾತ್ರ ಕಲ್ಲಿದ್ದಲು ಲಭ್ಯವಿದೆ.
ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ದಾಖಲೆಯಲ್ಲಿ ಈ ಮಾಹಿತಿ ಲಭ್ಯವಾಗಿದೆ. ದೇಶದ 135 ವಿದ್ಯುತ್ ಉತ್ಪಾದನಾ ಘಟಕಗಳ ಮಾನಿಟರ್ ಮಾಡಲಾಗಿದೆ. ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ಸಿಇಓ ಮಾನಿಟರ್ ಮಾಡಿದ್ದು, ಕಲ್ಲಿದ್ದಲು ಕೊರತೆ ಕಂಡುಬಂದಿದೆ.
ಕೇಂದ್ರ ವಿದ್ಯುತ್ ಸಚಿವಾಲಯದ ಪ್ರಕಾರ, ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕಡಿಮೆ ಇರುವುದು ವಿದ್ಯುತ್ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ.
ವಿದ್ಯುತ್ ಸಚಿವ ಆರ್.ಕೆ. ಸಿಂಗ್, ಉತ್ಪಾದನೆಯು ಕೆಲವು ದಿನಗಳವರೆಗೆ ಮುಂದಿನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತದೆ. ಸಾರಿಗೆಯಲ್ಲಿ ಕೆಲವು ಸಮಸ್ಯೆಗಳಿವೆ ಎಂಬುದನ್ನು ಸರ್ಕಾರಿ ಸಮಿತಿ ಪರಿಶೀಲಿಸುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ.
ಭಾರತದ ವಿದ್ಯುತ್ ಬೇಡಿಕೆಯು ಗಣನೀಯ ಏರಿಕೆಯಾಗಿದ್ದು, ಇದು ಒಳ್ಳೆಯದೇ. ಆದರೆ ಇದು ಕಲ್ಲಿದ್ದಲಿಗೆ ಭಾರೀ ಬೇಡಿಕೆಯನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು.
ಇದು ವಿದ್ಯುತ್ ಬಿಕ್ಕಟ್ಟಲ್ಲ. ನಾವು ದೇಶದ ಸಂಪೂರ್ಣ ಬೇಡಿಕೆಯನ್ನು ಪೂರೈಸುತ್ತಿದ್ದೇವೆ. ಬೇಡಿಕೆ ಹೆಚ್ಚುತ್ತಿದೆ. ಕಲ್ಲಿದ್ದಲು ಪೂರೈಕೆಯ ಮೇಲ್ವಿಚಾರಣೆ ಮಾಡುತ್ತಿದ್ದು, ಕಲ್ಲಿದ್ದಲು ಹೊಂದಿರುವ ಪ್ರದೇಶಗಳಲ್ಲಿ ಮಳೆಯಾಗಿದೆ. ನಿನ್ನೆ ಕೂಡ ಜಾರ್ಖಂಡ್, ಛತ್ತೀಸಗಡ ಮತ್ತು ಇತರೆ ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಕಲ್ಲಿದ್ದಲು ತೆಗೆಯುವಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಕಲ್ಲಿದ್ದಲು ಕೊರತೆ ಮತ್ತು ಸಾಂಕ್ರಾಮಿಕ ರೋಗದ ನಂತರದ ಬೇಡಿಕೆಯಿಂದಾಗಿ ಮುಂಬರುವ ತಿಂಗಳುಗಳಲ್ಲಿ ಭಾರತವು ಸಂಭವನೀಯ ಇಂಧನ ಪೂರೈಕೆ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ವಿದ್ಯುತ್ ಸಚಿವರು ತಿಳಿಸಿದ್ದಾರೆ.
ಭಾರತದ ಕಲ್ಲಿದ್ದಲು ಆಧಾರಿತ ವಿದ್ಯುತ್ ಕೇಂದ್ರಗಳು ಸೆಪ್ಟೆಂಬರ್ ಅಂತ್ಯದಲ್ಲಿ ಸರಾಸರಿ ನಾಲ್ಕು ದಿನಗಳ ದಾಸ್ತಾನು ಹೊಂದಿದ್ದವು, ಇದು ವರ್ಷಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ್ದಾಗಿದೆ.
ದೇಶದಲ್ಲಿ ಕಲ್ಲಿದ್ದಲು ಕೊರತೆಯು ಇನ್ನೂ ವಿದ್ಯುತ್ ಬಿಕ್ಕಟ್ಟಿಗೆ ಕಾರಣವಾಲ್ಲ. ಎಲೆಕ್ಟ್ರಿಸಿಟಿ ರೇಷನಿಂಗ್ ಅಗತ್ಯವಿಲ್ಲ ಎಂದು ವಿದ್ಯುತ್ ಸಚಿವ ಆರ್.ಕೆ. ಸಿಂಗ್ ತಿಳಿಸಿದ್ದಾರೆ,