ಆಪಲ್ ಐಫೋನ್ ಎಸ್ಇ ಗೆ ಪ್ರತಿಸ್ಪರ್ಧಿಯಾಗಿ ಒನ್ ಪ್ಲಸ್ ನಾರ್ಡ್ ಆಂಡ್ರಾಯ್ಡ್ ಫೋನ್ ಬಿಡುಗಡೆಗೆ ಒನ್ ಪ್ಲಸ್ ತಯಾರಿ ನಡೆಸಿದೆ. ಜುಲೈ 21 ರಂದು ಒನ್ ಪ್ಲಸ್ ನಾರ್ಡ್ ಬಿಡುಗಡೆಯಾಗಲಿದೆ.
ಒನ್ ಪ್ಲಸ್ ಭಾರತದಲ್ಲಿ ಬಹುದೊಡ್ಡ ಮಾರುಕಟ್ಟೆ ಹೊಂದಿದ್ದು, ಭಾರತೀಯರ ಬೇಡಿಕೆಗೆ ಅನುಗುಣವಾಗಿ ಕೈಗೆಟುಕುವ ದರದಲ್ಲಿ ಆಂಡ್ರಾಯ್ಡ್ ಫೋನ್ ಬಿಡುಗಡೆ ಮಾಡಲಾಗುತ್ತಿದೆ. ಒನ್ ಪ್ಲಸ್ ನಾರ್ಡ್ ಬೆಲೆ 24,999 ರೂ. ಆಗಿದೆ. ಇದರೊಂದಿಗೆ ಎಂಟ್ರಿ ಲೆವೆಲ್ ಮಾಡೆಲ್ ಫೋನ್ ಬೆಲೆ ಸುಮಾರು 20 ಸಾವಿರ ರೂಪಾಯಿಯಷ್ಟು ಕಡಿಮೆಯಾಗಿದೆ ಎಂದು ಹೇಳಲಾಗಿದೆ.
ವಿಶ್ವದ ಅತ್ಯಂತ ಕಡಿಮೆ ಬೆಲೆಯ 5 ಜಿ ಫೋನ್ ಇದಾಗಿದ್ದು, ಸ್ನಾಪ್ ಡ್ರಾಗನ್ 765g ಚಿಪ್ಸೆಟ್, 90hz ಆಮೋಲ್ಡ್ ಪ್ಯಾನೆಲ್, ಸೆಲ್ಫಿ ಕ್ಯಾಮೆರಾ ಸೇರಿದಂತೆ ಹಲವು ಫೀಚರ್ ಗಳನ್ನು ಒಳಗೊಂಡಿದೆ. ಒನ್ ಪ್ಲಸ್ ಬೆಲೆಯನ್ನು ಭಾರತೀಯರ ಬೇಡಿಕೆಗೆ ಅನುಗುಣವಾಗಿ ಕಡಿಮೆ ಮಾಡಿದೆ. ಜುಲೈ 21ರಂದು ಈ ಫೋನ್ ಬಿಡುಗಡೆಯಾಗಲಿದ್ದು ಭಾರತದಲ್ಲಿ ಒನ್ ಪ್ಲಸ್ ನಾರ್ಡ್ ದೊಡ್ಡ ಬದಲಾವಣೆ ನಿರೀಕ್ಷೆಯಲ್ಲಿದೆ ಎನ್ನಲಾಗಿದೆ.