alex Certify ʼವಾಟ್ಸಾಪ್ʼ​ ಬಳಕೆದಾರರಿಗೆ ಭರ್ಜರಿ ಗುಡ್ ​ನ್ಯೂಸ್​: ಬಹುದಿನದ ಬೇಡಿಕೆ ಕೊನೆಗೂ ಈಡೇರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಾಟ್ಸಾಪ್ʼ​ ಬಳಕೆದಾರರಿಗೆ ಭರ್ಜರಿ ಗುಡ್ ​ನ್ಯೂಸ್​: ಬಹುದಿನದ ಬೇಡಿಕೆ ಕೊನೆಗೂ ಈಡೇರಿಕೆ

ಬಳಕೆದಾರರ ಬೇಡಿಕೆಯಂತೆಯೇ ವಾಟ್ಸಾಪ್​ ಕೊನೆಗೂ ಡೆಸ್ಕ್​ಟಾಪ್​​ನಲ್ಲಿ ವಾಟ್ಸಾಪ್​ ಬಳಕೆ ಮಾಡುವವರಿಗೆ ವಿಡಿಯೋ ಕಾಲ್​ ಹಾಗೂ ವಾಯ್ಸ್ ಕಾಲ್​​ ಸೌಲಭ್ಯವನ್ನ ನೀಡಿದೆ. ಇದರಿಂದಾಗಿ ದಿನದ ಬಹುತೇಕ ಅವಧಿಯನ್ನ ಕಂಪ್ಯೂಟರ್​ ಪರದೆಯ ಮುಂದೆ ಕಳೆಯುವವರಿಗೆ ದೊಡ್ಡ ಲಾಭ ಸಿಕ್ಕಂತಾಗಿದೆ.

ಈ ಸಂಬಂಧ ಟ್ವೀಟ್​ ಮಾಡಿರುವ ವಾಟ್ಸಾಪ್​​​, ಎಂಡ್​ ಟು ಎಂಡ್​ ಎನ್​ಕ್ರಿಪ್ಟೆಡ್​​ ವಾಯ್ಸ್ ಕಾಲ್​​ ಹಾಗೂ ವಿಡಿಯೋ ಕಾಲ್​​ ಸೌಲಭ್ಯವನ್ನ ಡೆಸ್ಕ್​ಟಾಪ್​​ನಲ್ಲಿ ಅಪ್ಲಿಕೇಶನ್​ ಬಳಕೆ ಮಾಡುವವರಿಗೂ ನೀಡುತ್ತಿದ್ದೇವೆ ಎಂದು ಹೇಳಿದೆ. ಅಲ್ಲದೇ ಕಂಪ್ಯೂಟರ್​ನಲ್ಲಿ ಅಪ್ಲಿಕೇಶನ್​ ಡೌನ್​ಲೋಡ್​ ಮಾಡಲು ಬೇಕಾದ ಲಿಂಕ್​ನ್ನೂ ಶೇರ್ ಮಾಡಿದೆ.

ವರ್ಕ್ ಫ್ರಂ ಹೋಂನಿಂದಾಗಿ ವಿಡಿಯೋ ಕಾಲ್​ ಹಾಗೂ ವಾಯ್ಸ್ ಕಾಲ್​​ ಮಾಡುವವರ ಸಂಖ್ಯೆ ಏರಿಕೆಯಾಗಿತ್ತು. ಇದೀಗ ಕಂಪ್ಯೂಟರ್​ನಲ್ಲೂ ಈ ಅವಕಾಶ ಸಿಕ್ಕಿರೋದು ಮನೆಯಲ್ಲೇ ಕೆಲಸ ಮಾಡುವವರಿಗೆ ಇನ್ನಷ್ಟು ಖುಷಿ ಕೊಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...