ಬಳಕೆದಾರರ ಬೇಡಿಕೆಯಂತೆಯೇ ವಾಟ್ಸಾಪ್ ಕೊನೆಗೂ ಡೆಸ್ಕ್ಟಾಪ್ನಲ್ಲಿ ವಾಟ್ಸಾಪ್ ಬಳಕೆ ಮಾಡುವವರಿಗೆ ವಿಡಿಯೋ ಕಾಲ್ ಹಾಗೂ ವಾಯ್ಸ್ ಕಾಲ್ ಸೌಲಭ್ಯವನ್ನ ನೀಡಿದೆ. ಇದರಿಂದಾಗಿ ದಿನದ ಬಹುತೇಕ ಅವಧಿಯನ್ನ ಕಂಪ್ಯೂಟರ್ ಪರದೆಯ ಮುಂದೆ ಕಳೆಯುವವರಿಗೆ ದೊಡ್ಡ ಲಾಭ ಸಿಕ್ಕಂತಾಗಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ವಾಟ್ಸಾಪ್, ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ವಾಯ್ಸ್ ಕಾಲ್ ಹಾಗೂ ವಿಡಿಯೋ ಕಾಲ್ ಸೌಲಭ್ಯವನ್ನ ಡೆಸ್ಕ್ಟಾಪ್ನಲ್ಲಿ ಅಪ್ಲಿಕೇಶನ್ ಬಳಕೆ ಮಾಡುವವರಿಗೂ ನೀಡುತ್ತಿದ್ದೇವೆ ಎಂದು ಹೇಳಿದೆ. ಅಲ್ಲದೇ ಕಂಪ್ಯೂಟರ್ನಲ್ಲಿ ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಬೇಕಾದ ಲಿಂಕ್ನ್ನೂ ಶೇರ್ ಮಾಡಿದೆ.
ವರ್ಕ್ ಫ್ರಂ ಹೋಂನಿಂದಾಗಿ ವಿಡಿಯೋ ಕಾಲ್ ಹಾಗೂ ವಾಯ್ಸ್ ಕಾಲ್ ಮಾಡುವವರ ಸಂಖ್ಯೆ ಏರಿಕೆಯಾಗಿತ್ತು. ಇದೀಗ ಕಂಪ್ಯೂಟರ್ನಲ್ಲೂ ಈ ಅವಕಾಶ ಸಿಕ್ಕಿರೋದು ಮನೆಯಲ್ಲೇ ಕೆಲಸ ಮಾಡುವವರಿಗೆ ಇನ್ನಷ್ಟು ಖುಷಿ ಕೊಟ್ಟಿದೆ.