![](https://kannadadunia.com/wp-content/uploads/2021/01/1442924337-1088.jpg)
ಫೇಸ್ಬುಕ್ಗೆ ಬಳಕೆದಾರರ ಎಲ್ಲಾ ಮಾಹಿತಿಯನ್ನ ಹಂಚಿಕೊಳ್ಳುವ ವಾಟ್ಸಾಪ್ನ ಹೊಸ ನಿರ್ಧಾರದಿಂದಾಗಿ ಬಳಕೆದಾರರು ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತದೆ ಎಂಬ ಆತಂಕದಲ್ಲಿದ್ದಾರೆ. ಮಾತ್ರವಲ್ಲದೇ ಬೇರೆ ಮೆಸೆಜಿಂಗ್ ಅಪ್ಲಿಕೇಶನ್ಗಳತ್ತ ಮುಖ ಮಾಡ್ತಿದ್ದಾರೆ.
ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿರುವ ವಾಟ್ಸಾಪ್ ನಿಮ್ಮ ಖಾಸಗಿತನಕ್ಕೆ ಅಡ್ಡಿ ತರುವ ಉದ್ದೇಶ ನಮ್ಮದಲ್ಲ ಎಂದು ಸ್ಪಷ್ಟನೆ ನೀಡಿದೆ.
ನಿಮ್ಮ ಖಾಸಗಿ ಸಂದೇಶಗಳ ಮೇಲೆ ವಾಟ್ಸಾಪ್ನ ಹೊಸ ಷರತ್ತು ಹಾಗೂ ನಿಯಮ ಪರಿಣಾಮ ಬೀರೋದಿಲ್ಲ. ಈ ಹಿಂದಿನಂತೆಯೇ ನಿಮ್ಮ ವಾಟ್ಸಾಪ್ ಸಂದೇಶಗಳು ಎಂಡ್ ಟು ಎಂಡ್ ಎನ್ಕ್ರಿಪ್ಷನ್ನಲ್ಲೇ ಇರುತ್ತದೆ. ಕೇವಲ ವ್ಯವಹಾರದ ಉದ್ದೇಶದ ಸಂದೇಶಗಳಿಗೆ ಮಾತ್ರ ಹೊಸ ಷರತ್ತು ಹಾಗೂ ನಿಯಮಗಳ ಅನ್ವಯ ಎಂದು ಹೇಳಿದೆ.
ಅಲ್ಲದೇ ಹೊಸ ಷರತ್ತು ಹಾಗೂ ನಿಯಮದ ಪ್ರಕಾರ ವಾಟ್ಸಾಪ್ ತನ್ನ ಬಳಕೆದಾರರ ಯಾವ ವಿಚಾರಗಳನ್ನ ಹಂಚಿಕೊಳ್ಳಲ್ಲ ಅನ್ನೋದರ ಬಗ್ಗೆಯೂ ವಾಟ್ಸಾಪ್ ಸ್ಪಷ್ಟ ಮಾಹಿತಿ ನೀಡಿದೆ.
1. ನಿಮ್ಮ ವೈಯಕ್ತಿಕ ಸಂದೇಶ ಹಾಗೂ ಕರೆಗಳನ್ನ ವಾಟ್ಸಾಪ್ ಕೇಳಿಸಿಕೊಳ್ಳೋದಿಲ್ಲ. ಫೇಸ್ಬುಕ್ ಕೂಡ ಇದೇ ನಿಯಮವನ್ನ ಅನುಸರಿಸುತ್ತಿದೆ.
2.ನಮ್ಮ ಎಲ್ಲ ಬಳಕೆದಾರರ ಕರೆ ಹಾಗೂ ಸಂದೇಶದ ಮಾಹಿತಿಯನ್ನ ನಾವು ಸ್ಟೋರ್ ಮಾಡಿಕೊಳ್ಳೋದಿಲ್ಲ .
3. ನಿಮ್ಮ ಕ್ಯಾಂಟಾಕ್ಟ್ ಲಿಸ್ಟ್ನ ಮಾಹಿತಿಯನ್ನ ವಾಟ್ಸಾಪ್ ಫೇಸ್ಬುಕ್ ಜೊತೆ ಹಂಚಿಕೊಳ್ಳುವುದಿಲ್ಲ.
4. ನೀವು ಡಿಸಪಿಯರ್ ಮೆಸೇಜ್ ಆಯ್ಕೆಯನ್ನ ಸೆಟ್ ಮಾಡಬಹುದಾಗಿದೆ.
5. ವಾಟ್ಸಾಪ್ ಹಾಗೂ ಫೇಸ್ಬುಕ್ ನೀವು ಶೇರ್ ಮಾಡಿರುವ ಲೊಕೇಷನ್ನ್ನು ನೋಡಲಾಗುವುದಿಲ್ಲ.
6. ವಾಟ್ಸಾಪ್ ಗ್ರೂಪ್ಗಳ ಖಾಸಗೀತನಕ್ಕೂ ಭಂಗವಿಲ್ಲ.
7. ನೀವು ನಿಮ್ಮ ಡೇಟಾಗಳನ್ನ ಡೌನ್ಲೋಡ್ ಮಾಡಬಹುದಾಗಿದೆ.