alex Certify ʼವಾಟ್ಸಾಪ್ʼ ಬಳಕೆದಾರರಿಗೆ ಇಲ್ಲಿದೆ ಹೊಸ ಅಪ್ಡೇಟ್‌ ಕುರಿತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಾಟ್ಸಾಪ್ʼ ಬಳಕೆದಾರರಿಗೆ ಇಲ್ಲಿದೆ ಹೊಸ ಅಪ್ಡೇಟ್‌ ಕುರಿತ ಮಾಹಿತಿ

ಆಪಲ್​ ಮೊಬೈಲ್​ ಬಳಕೆದಾರರಿಗೆ ವಾಟ್ಸಾಪ್​ ಎರಡು ಮಹತ್ವದ ಅಪ್​ಡೇಟ್​​ಗಳನ್ನ ನೀಡಿದೆ. ಈ ಹೊಸ ಅಪ್​ಡೇಟ್​ ಮೂಲಕ ನೀವು ವಾಟ್ಸಾಪ್​ನಲ್ಲಿ ಬಂದ ಫೋಟೋ ಹಾಗೂ ವಿಡಿಯೋಗಳು ಗೋಚರಿಸುವ ರೀತಿಯಲ್ಲಿ ಸುಧಾರಣೆಯನ್ನ ತರಲಾಗಿದೆ.

ಇದರ ಜೊತೆಯಲ್ಲಿ ಈ ಹಿಂದೆ ವಾಟ್ಸಾಪ್​ ಗ್ರೂಪ್​ಗಳಲ್ಲಿ ಡಿಸಪಿಯರಿಂಗ್​ ಮೆಸೇಜ್​ ಆಯ್ಕೆ ಕೇವಲ ಅಡ್ಮಿನ್​ಗಳಿಗೆ ಮಾತ್ರ ಮೀಸಲಿಡಲಾಗಿತ್ತು. ಆದರೆ ಇದೀಗ ಗ್ರೂಪ್​ನ ಯಾವುದೇ ಸದಸ್ಯರು ಈ ಆಯ್ಕೆಯನ್ನ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರ ಜೊತೆಯಲ್ಲಿ ವಾಟ್ಸಾಪ್​ ಡಿಸಪಿಯರಿಂಗ್​ ಫೋಟೋ ಆಯ್ಕೆಯನ್ನ ಆಂಡ್ರಾಯ್ಡ್ ಹಾಗೂ ಐಒಎಸ್​ಗಳೆರಡಲ್ಲಿಯೂ ತರಲು ವಿವಿಧ ಸಿದ್ಧತೆ ಕೈಗೊಳ್ತಿದೆ.

ಈ ಹೊಸ ಅಪ್​ಡೇಟ್​ಗಳನ್ನ ವಾಟ್ಸಾಪ್​ ಆಪ್​ ಸ್ಟೋರ್​ನಲ್ಲಿ ಬಿಡುಗಡೆ ಮಾಡಿದೆ. ಮೊದಲ ಸುಧಾರಣೆಯಿಂದಾಗಿ ವಾಟ್ಸಾಪ್​ ಬಳಕೆದಾರರು ಫೋಟೋ ಹಾಗೂ ವಿಡಿಯೋಗಳನ್ನ ತೆರೆಯದೆಯೇ ಅದರ ಪ್ರೀವಿವ್ಯೂ ನೋಡಬಹುದಾಗಿದೆ.

ಡಿಸಪಿಯರಿಂಗ್​ ಮೆಸೇಜ್​ ಆಯ್ಕೆಯನ್ನ ಗ್ರೂಪ್​ನ ಇತರ ಸದಸ್ಯರಿಗೆ ನೀಡಲಾಗಿದೆಯಾದರೂ ಅಡ್ಮಿನ್​ಗಳಿಗೆ ಹೆಚ್ಚಿನ ಆಯ್ಕೆ ಇರಲಿದೆ. ಈ ಎಲ್ಲಾ ಸೌಲಭ್ಯಗಳನ್ನ ಪಡೆಯಲು ನೀವು ಆಪ್​ಸ್ಟೋರ್​ನಲ್ಲಿ ಈಗಲೇ ವಾಟ್ಸಾಪ್​​ನ್ನು ಅಪ್​ಡೇಟ್​ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...