alex Certify ಹಣ ವರ್ಗಾವಣೆ ವೇಳೆ IFSC ಕೋಡ್ ತಪ್ಪಾಗಿ ನಮೂದಿಸಿದ್ರೆ ಏನಾಗುತ್ತೆ….? ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ ವರ್ಗಾವಣೆ ವೇಳೆ IFSC ಕೋಡ್ ತಪ್ಪಾಗಿ ನಮೂದಿಸಿದ್ರೆ ಏನಾಗುತ್ತೆ….? ಇಲ್ಲಿದೆ ಸಂಪೂರ್ಣ ಮಾಹಿತಿ

ಆನ್​​ಲೈನ್​ ಬ್ಯಾಂಕಿಂಗ್​ ವ್ಯವಸ್ಥೆಯಿಂದಾಗಿ ಬ್ಯಾಂಕ್​ಗೆ ಅಲೆಯಬೇಕು ಅನ್ನೋ ಕಷ್ಟ ದೂರಾಗಿದೆ. ಮೊದಲೆಲ್ಲಾ ಸರದಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೇ ಕಾದು ಒಂದು ಬ್ಯಾಂಕಿನಿಂದ ಮತ್ತೊಂದು ಬ್ಯಾಂಕ್​​ಗೆ ಹಣ ವರ್ಗಾವಣೆ ಮಾಡಲಾಗ್ತಿತ್ತು.

ಆದರೆ ನೆಟ್​ ಬ್ಯಾಂಕಿಂಗ್​ನಿಂದಾಗಿ ಕೆಲವೇ ಸೆಕೆಂಡ್​ಗಳಲ್ಲಿ ಹಣ ವರ್ಗಾವಣೆ ಮಾಡಬಹುದಾಗಿದೆ. ಪ್ರತಿ ಬ್ಯಾಂಕ್​​ಗೂ ಅದರದ್ದೇ ಅಪ್ಲಿಕೇಶನ್​ ಇದ್ದು ಈ ಮೂಲಕ ಎಲ್ಲಾ ವ್ಯವಹಾರವನ್ನ ನಡೆಸಬಹುದಾಗಿದೆ.

ಆದರೆ ನೀವು ಆನ್​ಲೈನ್​ ಬ್ಯಾಂಕಿಂಗ್​ ಮೂಲಕ ಬೇರೆ ಬ್ಯಾಂಕಿನ ಖಾತೆಗೆ ಹಣ ವರ್ಗಾವಣೆ ಮಾಡುವ ವೇಳೆ ಐಎಫ್​ಎಸ್​ಸಿ ಕೋಡ್​ನ್ನು ತಪ್ಪಾಗಿ ನಮೂದಿಸಿದಲ್ಲಿ ಏನಾಗಬಹುದು..? ನಿಮ್ಮ ಹಣ ಬೇರೆ ಯಾರದ್ದೋ ಖಾತೆಗೆ ಹೋಗಿ ಬಿಡಬಹುದಾ..? ಇಂತಹ ಪ್ರಶ್ನೆ ನಿಮ್ಮ ಮನಸ್ಸಿನಲ್ಲೂ ಮೂಡಿರಬಹುದು.

ಆನ್​ಲೈನ್​ ವ್ಯವಹಾರದ ವೇಳೆ ಐಎಫ್​ಎಸ್​ಸಿ ಕೋಡ್​ ನಮೂದಿಸುವ ಮುನ್ನ ನೀವು ಕೊಂಚ ಎಚ್ಚರಿಕೆಯಿಂದ ಇರೋದು ಒಳಿತು. ನೀವು ಖಾತೆದಾರರ ಹೆಸರು ಹಾಗೂ ಖಾತೆಯ ಸಂಖ್ಯೆಯನ್ನ ಸರಿಯಾಗಿ ನಮೂದಿಸಿದಲ್ಲಿ ಐಎಫ್​ಎಸ್​ಸಿ ಸಂಖ್ಯೆ ತಪ್ಪಾದರೂ ನಿಮ್ಮ ಹಣ 99 ಪ್ರತಿಶತ ಸೇರಬೇಕಾದವರ ಖಾತೆಗೆ ಹೋಗಿ ಸೇರಲಿದೆ.

ಆದರೆ ಐಎಫ್​​ಎಸ್​ಸಿ ಸಂಖ್ಯೆ ಕೂಡ ವ್ಯವಹಾರದ ಭಾಗವಾಗಿರೋದ್ರಿಂದ  ಮುಂದಿನ ಬಾರಿ ವ್ಯವಹಾರ ಮಾಡುವ ವೇಳೆ ಐಎಫ್​ಎಸ್​ಸಿ ಕೋಡ್​ನ್ನು ಮರುಪರಿಶೀಲನೆ ಮಾಡಲು ಮರೆಯದಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...