ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಜನರು ದಿನನಿತ್ಯದ ಬದುಕಲ್ಲಿ ಅನುಸರಿಸುವ ವಿವಿಧ ಟೆಕ್ನಿಕ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪ್ರಮಾಣ ಹೆಚ್ಚಾಗಿತ್ತು.
ಇದೀಗ ರೈತನೊಬ್ಬ ತಾನು ಬೆಳೆದ ಹಣ್ಣುಗಳನ್ನು ಗಾತ್ರಕ್ಕೆ ಅನುಗುಣವಾಗಿ ವಿಂಗಡಿಸುವ ಟೆಕ್ನಿಕ್ ನ ವಿಡಿಯೋ ವೈರಲ್ ಆಗಿದೆ.
ಉದ್ಯಮಿ ವಾಲಾ ಅಪ್ಸರ್ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದು ಪ್ರಪಂಚದ ಅತ್ಯಂತ ಸರಳವಾದ ವರ್ಗೀಕರಣ ವ್ಯವಸ್ಥೆ ಎಂದು ಶೀರ್ಷಿಕೆ ನೀಡಿದ್ದಾರೆ.
ದಾಳಿಂಬೆ ಹಣ್ಣಿನ ರಾಶಿ ಮಧ್ಯ ಕುಳಿತ ರೈತನೊಬ್ಬ ಅದನ್ನು ವರ್ಗೀಕರಿಸಲು, 2 ಕಬ್ಬಿಣದ ರಾಡ್ ಬಳಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
4 ಬಾಕ್ಸ್ ನ ಮೇಲೆ 2 ಕಬ್ಬಿಣದ ರಾಡುಗಳನ್ನು ಸಮಾನಾಂತರವಲ್ಲದ ರೀತಿಯಲ್ಲಿ ಇಡಲಾಗಿದ್ದು, ದೊಡ್ಡ ಗಾತ್ರದ ಹಣ್ಣು ಕೊನೆಯ ಬಾಕ್ಸ್ ಮೇಲೆ, ಸಾಮಾನ್ಯ ಗಾತ್ರದ ಹಣ್ಣು ಅನಂತರದ ಬಾಕ್ಸ್ ಗಳಲ್ಲಿ, ಸಣ್ಣ ಹಣ್ಣುಗಳಿದ್ದರೆ ಮೊದಲ ಬಾಕ್ಸ್ ನಲ್ಲಿ ಬೀಳುವಂತೆ ಒಂದೊಂದೇ ಹಣ್ಣನ್ನು ಎತ್ತರದಿಂದ ಬಿಡಲಾಗುತ್ತದೆ. ಸಹಜವಾಗಿ ಈ ವಿಡಿಯೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು 1.8 ಲಕ್ಷ ಜನ ವೀಕ್ಷಿಸಿದ್ದಾರೆ 44000 ಮಂದಿ ಲೈಕಿಸಿದ್ದು, 15000 ರೀ ಟ್ವೀಟ್ ಮಾಡಿದ್ದಾರೆ.