alex Certify ಫ್ಲೈಟ್​ ಮೋಡ್​ ಆನ್​ ಮಾಡದೇ ಇನ್​ಕಮಿಂಗ್​ ಕರೆಗಳನ್ನ ಬಂದ್​ ಮಾಡೋದು ಹೇಗೆ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ಲೈಟ್​ ಮೋಡ್​ ಆನ್​ ಮಾಡದೇ ಇನ್​ಕಮಿಂಗ್​ ಕರೆಗಳನ್ನ ಬಂದ್​ ಮಾಡೋದು ಹೇಗೆ…..?

ಎಲ್ಲಾ ಟೆಲಿಕಾಂ ಕಂಪನಿಗಳು ಹಾಗೂ ಅಪ್ಲಿಕೇಶನ್​​ಗಳು ಸ್ಪ್ಯಾಮ್​ ಕರೆಗಳನ್ನ ನಿಯಂತ್ರಿಸೋಕೆ ಒಂದಿಲ್ಲೊಂದು ಕ್ರಮಗಳನ್ನ ಕೈಗೊಳ್ಳುತ್ತಲೇ ಇದೆ. ಆದರೆ ಈ ಎಲ್ಲಾ ಪ್ರಯತ್ನಗಳ ಬಳಿಕವೂ ಗ್ರಾಹಕರಿಗೆ ಪದೇ ಪದೇ ಸ್ಪ್ಯಾಮ್​ ಕಾಲ್​ಗಳು ಬರ್ತಾನೇ ಇರುತ್ತವೆ. ಕೆಲವೊಮ್ಮ ಸ್ನೇಹಿತರ ಹಾಗೂ ಆಪ್ತರ ಜೊತೆ ಒಳ್ಳೆಯ ಸಮಯವನ್ನ ಕಳೆಯುತ್ತಿದ್ದಾಗ ಇಂತಹ ಕರೆಗಳು ತುಂಬಾನೇ ಕಿರಿಕಿರಿ ಎನಿಸಿಬಿಡುತ್ತೆ. ಹೀಗಾಗಿ ಫ್ಲೈಟ್​ ಮೋಡ್​ನ್ನು ಆನ್​ ಮಾಡದೇ ಬರುವ ಕರೆಗಳನ್ನ ಹೇಗೆ ತಾತ್ಕಾಲಿಕವಾಗಿ ನಿಲ್ಲಿಸಬಹುದು ಅನ್ನೋದಕ್ಕೆ ಇಲ್ಲಿ ಕೆಲವೊಂದಿಷ್ಟು ಮಾರ್ಗಗಳಿವೆ.

ಕಾಲ್​ ಸೆಟ್ಟಿಂಗ್​​ಗೆ ಹೋಗಿ, ಅಲ್ಲಿ ಕಾಲ್​ ಫಾರ್ವಡಿಂಗ್​ ಆಯ್ಕೆಯನ್ನ ಕ್ಲಿಕ್​ ಮಾಡಿ. ಈಗ ನಿಮಗೆ

1. ಆಲ್ವೇಸ್​ ಫಾರ್ವಡ್​

2. ಫಾರ್ವಡ್​ ವೆನ್​ ಬ್ಯುಸಿ ಹಾಗೂ

3. ಫಾರ್ವಡ್​ ವೆನ್​ ಅನ್​ಸೇವ್ಡ್

ಎಂಬ ಮೂರು ಆಯ್ಕೆಗಳು ಕಾಣಸಿಗುತ್ತವೆ. ಇದರಲ್ಲಿ ಆಲ್​ವೇಸ್​ ಫಾರ್ವಡ್​ ಎಂಬ ಆಯ್ಕೆಯನ್ನ ಕ್ಲಿಕ್​ ಮಾಡಿ. ಇದರಲ್ಲಿ ಸಂಖ್ಯೆಯನ್ನ ನಮೂದಿಸಿ. ಹಾಗೂ ಎನೆಬಲ್​ ಬಟನ್​ ಮೇಲೆ ಕ್ಲಿಕ್​ ಮಾಡಿ. ಈ ರೀತಿ ಮಾಡೋದ್ರಿಂದ ನೀವು ಬರುವ ಕರೆಗಳನ್ನ ಬಂದ್ ಮಾಡಬಹುದಾಗಿದೆ. ಅಲ್ಲದೇ ಬೇರೆ ಯಾವುದೇ ಅಡಚಣೆ ಇಲ್ಲದೇ ಮೊಬೈಲ್​ ಬಳಕೆ ಮಾಡಬಹುದಾಗಿದೆ.

ಅಂತ್ಯೋದಯ ಕಾರ್ಡ್ ಗೆ 35 ಕೆಜಿ ಅಕ್ಕಿ, BPL ಸದಸ್ಯರಿಗೆ 5 ಕೆಜಿ ಅಕ್ಕಿ, ಕಾರ್ಡ್ ಗೆ 2 ಕೆಜಿ ಗೋಧಿ ಮೊದಲಿನಂತೆಯೇ ಇದೆ: ಸಿದ್ಧರಾಮಯ್ಯ ಹೇಳಿಕೆಗೆ ಬಿ.ಸಿ.ಪಾಟೀಲ್ ಟಾಂಗ್

ಸ್ಮಾರ್ಟ್​ಫೋನ್​ ಸೆಟ್ಟಿಂಗ್​​ನಲ್ಲಿ ಸೌಂಡ್​ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇದರಲ್ಲಿ ಡು ನಾಟ್​ ಡಿಸ್ಟರ್ಬ್​ ಎಂಬ ಆಯ್ಕೆಯನ್ನ ಒತ್ತಿರಿ.
ಈ ಎರಡೂ ಆಯ್ಕೆಗಳನ್ನ ಹೊರತುಪಡಿಸಿ ನೀವು ಕಾಲ್​ ಬಾರಿಂಗ್​ ಎಂಬ ವಿಧಾನದ ಮೂಲಕವೂ ಇಂತಹ ಕರೆಗಳಿಂದ ಮುಕ್ತಿ ಹೊಂದಬಹುದು.

ಕಾಲ್​ ಸೆಟ್ಟಿಂಗ್​​ನಲ್ಲಿ ಅಡ್ವಾನ್ಸ್ ಸೆಟ್ಟಿಂಗ್​ ಆಯ್ಕೆಯನ್ನ ಕ್ಲಿಕ್​ ಮಾಡಿ. ಇಲ್ಲಿ ನಿಮಗೆ ಕಾಲ್​ ಬಾರಿಂಗ್​ ಎಂಬ ಆಯ್ಕೆ ಕಾಣಲಿದೆ. ಇಲ್ಲಿ ಆಲ್​ ಇನ್​​ಕಮಿಂಗ್​ ಕಾಲ್ಸ್ ಎಂಬ ಆಯ್ಕೆಯನ್ನ ಕ್ಲಿಕ್ಕಿಸಿ ಕಾಲ್​ ಬಾರಿಂಗ್​ ಪಾಸ್​ವರ್ಡ್ ನಮೂದಿಸಿ. 0000 ಅಥವಾ 1234 ಸಾಮಾನ್ಯ ಪಾಸ್​ವರ್ಡ್​ಗಳಾಗಿವೆ. ಇದೀಗ ಟರ್ನ್ ಆನ್​ ಎಂಬ ಆಯ್ಕೆ ಕ್ಲಿಕ್​ ಮಾಡಿದ್ರೆ ನಿಮಗೆ ಯಾವುದೇ ಇನ್​ಕಮಿಂಗ್​ ಕರೆಯ ಕಾಟ ಇರೋದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...