ಎಲ್ಲಾ ಟೆಲಿಕಾಂ ಕಂಪನಿಗಳು ಹಾಗೂ ಅಪ್ಲಿಕೇಶನ್ಗಳು ಸ್ಪ್ಯಾಮ್ ಕರೆಗಳನ್ನ ನಿಯಂತ್ರಿಸೋಕೆ ಒಂದಿಲ್ಲೊಂದು ಕ್ರಮಗಳನ್ನ ಕೈಗೊಳ್ಳುತ್ತಲೇ ಇದೆ. ಆದರೆ ಈ ಎಲ್ಲಾ ಪ್ರಯತ್ನಗಳ ಬಳಿಕವೂ ಗ್ರಾಹಕರಿಗೆ ಪದೇ ಪದೇ ಸ್ಪ್ಯಾಮ್ ಕಾಲ್ಗಳು ಬರ್ತಾನೇ ಇರುತ್ತವೆ. ಕೆಲವೊಮ್ಮ ಸ್ನೇಹಿತರ ಹಾಗೂ ಆಪ್ತರ ಜೊತೆ ಒಳ್ಳೆಯ ಸಮಯವನ್ನ ಕಳೆಯುತ್ತಿದ್ದಾಗ ಇಂತಹ ಕರೆಗಳು ತುಂಬಾನೇ ಕಿರಿಕಿರಿ ಎನಿಸಿಬಿಡುತ್ತೆ. ಹೀಗಾಗಿ ಫ್ಲೈಟ್ ಮೋಡ್ನ್ನು ಆನ್ ಮಾಡದೇ ಬರುವ ಕರೆಗಳನ್ನ ಹೇಗೆ ತಾತ್ಕಾಲಿಕವಾಗಿ ನಿಲ್ಲಿಸಬಹುದು ಅನ್ನೋದಕ್ಕೆ ಇಲ್ಲಿ ಕೆಲವೊಂದಿಷ್ಟು ಮಾರ್ಗಗಳಿವೆ.
ಕಾಲ್ ಸೆಟ್ಟಿಂಗ್ಗೆ ಹೋಗಿ, ಅಲ್ಲಿ ಕಾಲ್ ಫಾರ್ವಡಿಂಗ್ ಆಯ್ಕೆಯನ್ನ ಕ್ಲಿಕ್ ಮಾಡಿ. ಈಗ ನಿಮಗೆ
1. ಆಲ್ವೇಸ್ ಫಾರ್ವಡ್
2. ಫಾರ್ವಡ್ ವೆನ್ ಬ್ಯುಸಿ ಹಾಗೂ
3. ಫಾರ್ವಡ್ ವೆನ್ ಅನ್ಸೇವ್ಡ್
ಎಂಬ ಮೂರು ಆಯ್ಕೆಗಳು ಕಾಣಸಿಗುತ್ತವೆ. ಇದರಲ್ಲಿ ಆಲ್ವೇಸ್ ಫಾರ್ವಡ್ ಎಂಬ ಆಯ್ಕೆಯನ್ನ ಕ್ಲಿಕ್ ಮಾಡಿ. ಇದರಲ್ಲಿ ಸಂಖ್ಯೆಯನ್ನ ನಮೂದಿಸಿ. ಹಾಗೂ ಎನೆಬಲ್ ಬಟನ್ ಮೇಲೆ ಕ್ಲಿಕ್ ಮಾಡಿ. ಈ ರೀತಿ ಮಾಡೋದ್ರಿಂದ ನೀವು ಬರುವ ಕರೆಗಳನ್ನ ಬಂದ್ ಮಾಡಬಹುದಾಗಿದೆ. ಅಲ್ಲದೇ ಬೇರೆ ಯಾವುದೇ ಅಡಚಣೆ ಇಲ್ಲದೇ ಮೊಬೈಲ್ ಬಳಕೆ ಮಾಡಬಹುದಾಗಿದೆ.
ಅಂತ್ಯೋದಯ ಕಾರ್ಡ್ ಗೆ 35 ಕೆಜಿ ಅಕ್ಕಿ, BPL ಸದಸ್ಯರಿಗೆ 5 ಕೆಜಿ ಅಕ್ಕಿ, ಕಾರ್ಡ್ ಗೆ 2 ಕೆಜಿ ಗೋಧಿ ಮೊದಲಿನಂತೆಯೇ ಇದೆ: ಸಿದ್ಧರಾಮಯ್ಯ ಹೇಳಿಕೆಗೆ ಬಿ.ಸಿ.ಪಾಟೀಲ್ ಟಾಂಗ್
ಸ್ಮಾರ್ಟ್ಫೋನ್ ಸೆಟ್ಟಿಂಗ್ನಲ್ಲಿ ಸೌಂಡ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇದರಲ್ಲಿ ಡು ನಾಟ್ ಡಿಸ್ಟರ್ಬ್ ಎಂಬ ಆಯ್ಕೆಯನ್ನ ಒತ್ತಿರಿ.
ಈ ಎರಡೂ ಆಯ್ಕೆಗಳನ್ನ ಹೊರತುಪಡಿಸಿ ನೀವು ಕಾಲ್ ಬಾರಿಂಗ್ ಎಂಬ ವಿಧಾನದ ಮೂಲಕವೂ ಇಂತಹ ಕರೆಗಳಿಂದ ಮುಕ್ತಿ ಹೊಂದಬಹುದು.
ಕಾಲ್ ಸೆಟ್ಟಿಂಗ್ನಲ್ಲಿ ಅಡ್ವಾನ್ಸ್ ಸೆಟ್ಟಿಂಗ್ ಆಯ್ಕೆಯನ್ನ ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಕಾಲ್ ಬಾರಿಂಗ್ ಎಂಬ ಆಯ್ಕೆ ಕಾಣಲಿದೆ. ಇಲ್ಲಿ ಆಲ್ ಇನ್ಕಮಿಂಗ್ ಕಾಲ್ಸ್ ಎಂಬ ಆಯ್ಕೆಯನ್ನ ಕ್ಲಿಕ್ಕಿಸಿ ಕಾಲ್ ಬಾರಿಂಗ್ ಪಾಸ್ವರ್ಡ್ ನಮೂದಿಸಿ. 0000 ಅಥವಾ 1234 ಸಾಮಾನ್ಯ ಪಾಸ್ವರ್ಡ್ಗಳಾಗಿವೆ. ಇದೀಗ ಟರ್ನ್ ಆನ್ ಎಂಬ ಆಯ್ಕೆ ಕ್ಲಿಕ್ ಮಾಡಿದ್ರೆ ನಿಮಗೆ ಯಾವುದೇ ಇನ್ಕಮಿಂಗ್ ಕರೆಯ ಕಾಟ ಇರೋದಿಲ್ಲ.