alex Certify ಸ್ವಯಂ ಉದ್ಯೋಗ ಶುರು ಮಾಡಲು ನೆರವಾಗುತ್ತೆ ಮೋದಿ ಸರ್ಕಾರದ ಈ ಯೋಜನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಯಂ ಉದ್ಯೋಗ ಶುರು ಮಾಡಲು ನೆರವಾಗುತ್ತೆ ಮೋದಿ ಸರ್ಕಾರದ ಈ ಯೋಜನೆ

ಸ್ವಯಂ ಉದ್ಯೋಗ ಶುರು ಮಾಡಲು ಬಯಸಿದ್ದು, ಹಣವಿಲ್ಲವೆಂದಾದ್ರೆ ಚಿಂತೆ ಮಾಡುವ ಅಗತ್ಯವಿಲ್ಲ. ಮೋದಿ ಸರ್ಕಾರ ಸ್ವಯಂ ಉದ್ಯೋಗಿಗಳಿಗೆ ನೆರವು ನೀಡಲು ಕೆಲವೊಂದು ಯೋಜನೆಗಳನ್ನು ಜಾರಿಗೆ ತಂದಿದೆ. ಅದ್ರ ಲಾಭ ಪಡೆದು ನೀವು ಸ್ವಯಂ ಉದ್ಯೋಗ ಶುರು ಮಾಡಬಹುದು.

ಪಿಎಂ ಸ್ವನಿಧಿ ಯೋಜನೆ : ಕೊರೊನಾ ಮಹಾಮಾರಿ ಸಂದರ್ಭದಲ್ಲಿ ನಷ್ಟ ಅನುಭವಿಸಿದ ಹಾಗೂ ಕೆಲಸ ಕಳೆದುಕೊಂಡ ರಸ್ತೆ ಬದಿಯ ಅಂಗಡಿ ಮಾಲೀಕರು, ಸಣ್ಣ ವ್ಯಾಪಾರಿಗಳಿಗೆ ಸ್ವನಿಧಿ ಯೋಜನೆ ನೆರವಾಗಲಿದೆ. ಇಂತವರಿಗೆ ಮತ್ತೆ ವ್ಯಾಪಾರ ಶುರು ಮಾಡಲು ಸಾಲ ನೀಡಲಾಗ್ತಿದೆ. ಈ ಯೋಜನೆಯಡಿ 10 ಸಾವಿರದವರೆಗೆ ಸಾಲ ನೀಡಲಾಗ್ತಿದೆ. ಇದನ್ನು ಒಂದು ವರ್ಷದೊಳಗೆ ಮರುಪಾವತಿ ಮಾಡಬೇಕಾಗುತ್ತದೆ. ಒಂದು ವರ್ಷದವರೆಗೆ ಯಾವುದೇ ಬಡ್ಡಿ ನೀಡಬೇಕಾಗಿಲ್ಲ. pmsvanidhi.mohua.gov.in ನಲ್ಲಿ ಅರ್ಜಿ ಸಲ್ಲಿಸಬಹುದು.

ಗಮನಿಸಿ: ಲ್ಯಾಪ್ಸ್ ಆಗಿರುವ LIC ಪಾಲಿಸಿ ಪುನರುಜ್ಜೀವನಗೊಳಿಸುವ ಕುರಿತು ಇಲ್ಲಿದೆ ಮಾಹಿತಿ

ಕ್ರೆಡಿಟ್ ಗ್ಯಾರಂಟಿ ಸ್ಕೀಮ್ ಫಂಡ್ : ಸಾಮಾನ್ಯವಾಗಿ ಬ್ಯಾಂಕ್ ಗಳು ಹೆಚ್ಚಿನ ಬಡ್ಡಿ ದರಕ್ಕೆ ಸಾಲ ನೀಡ್ತಿವೆ. ಹಾಗೆ ಸಾಲ ನೀಡಲು ಆಸ್ತಿ ಅಡಮಾನ ಇಡಲು ಕೇಳುತ್ತದೆ. ಆದ್ರೆ ಸೂಕ್ಷ್ಮ, ಸಣ್ಣ, ಮಧ್ಯಮ ವರ್ಗದ  ಉದ್ಯಮಿಗಳಿಗೆ ಅಡಮಾನ ಇಡಲು ಆಸ್ತಿ ಇರುವುದಿಲ್ಲ. ಅವ್ರ ಸಹಾಯಕ್ಕಾಗಿಯೇ ಸರ್ಕಾರ ಕ್ರೆಡಿಟ್ ಗ್ಯಾರಂಟಿ ಸ್ಕೀಮ್ ಫಂಡ್ ಶುರು ಮಾಡಿದೆ. ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ, ಕ್ರೆಡಿಟ್ ಗ್ಯಾರಂಟಿ ನೀಡುತ್ತದೆ. ಹಳೆ ವ್ಯವಹಾರ ಹಾಗೂ ಹೊಸ ವ್ಯಾಪಾರ ಎರಡಕ್ಕೂ ಯಾವುದೇ ಅಡಮಾನವಿಲ್ಲದೆ ಸಾಲ ನೀಡುತ್ತದೆ.

ಸ್ಟ್ಯಾಂಡ್ ಆಫ್ ಇಂಡಿಯಾ ಯೋಜನೆ : ಇದು ಪರಿಶಿಷ್ಟ ಜಾತಿ, ಬುಡಕಟ್ಟು ಮತ್ತು ಮಹಿಳೆಯರ ಉದ್ಯೋಗಕ್ಕೆ ಪ್ರೋತ್ಸಾಹ ನೀಡುತ್ತದೆ. ಈ ಯೋಜನೆಯನ್ನು 2016ರಲ್ಲಿ ಪ್ರಾರಂಭಿಸಲಾಗಿದೆ. ಇದ್ರಲ್ಲಿ ವ್ಯಾಪಾರಕ್ಕಾಗಿ 10 ಸಾವಿರದಿಂದ 1 ಕೋಟಿ ರೂಪಾಯಿವರೆಗೆ ಸಾಲ ನೀಡಲಾಗುತ್ತದೆ.

ಪಿಎಂ ಮುದ್ರಾ ಯೋಜನೆ : ವ್ಯಾಪಾರ ಶುರು ಮಾಡಬಯಸುವ ಯಾವುದೇ ವ್ಯಕ್ತಿ ಪಿಎಂ ಮುದ್ರಾ ಯೋಜನೆಯಡಿ ಸಾಲ ಪಡೆಯಬಹುದು. ಇದ್ರಲ್ಲಿ 10 ಲಕ್ಷ ರೂಪಾಯಿವರೆಗೆ ಸಾಲ ಸಿಗುತ್ತದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಇದ್ರಲ್ಲಿ ಸಾಲ ಪಡೆದವರಲ್ಲಿ ಶೇಕಡಾ 68ರಷ್ಟು ಮಂದಿ ಮಹಿಳೆಯರು.

2021 ರ ಕೇಂದ್ರ ಬಜೆಟ್ ನಲ್ಲಿ ಏನಿರಲಿದೆ…? ಇಲ್ಲಿದೆ ಮಹತ್ವದ ಮಾಹಿತಿ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...