alex Certify ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದ ವೋಡಾಫೋನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದ ವೋಡಾಫೋನ್

ವೋಡಾಫೋನ್ ಜನಪ್ರಿಯ ಯೋಜನೆಯ ಬೆಲೆಯನ್ನು ಹೆಚ್ಚಿಸುವ ಮೂಲಕ ತನ್ನ ಗ್ರಾಹಕರಿಗೆ ದೊಡ್ಡ ಆಘಾತ ನೀಡಿದೆ. ವೋಡಾಫೋನ್ ತನ್ನ ಜನಪ್ರಿಯ ಪ್ರೀಮಿಯಂ ರೆಡ್‌ಎಕ್ಸ್ ಪೋಸ್ಟ್ ಪೇಯ್ಡ್ ಯೋಜನೆಯ ಬೆಲೆಯನ್ನು ಹೆಚ್ಚಿಸಿದೆ. ಈ ಮೊದಲು ಗ್ರಾಹಕರು ಇದಕ್ಕೆ 999 ರೂಪಾಯಿ ಪಾವತಿಸುತ್ತಿದ್ದರು. ಆದರೆ ಈಗ ಬೆಲೆ ಹೆಚ್ಚಾದ ನಂತರ ಅವರು 1,099 ರೂಪಾಯಿ ಪಾವತಿಸಬೇಕು.

ವೋಡಾಫೋನ್‌ನ ಈ ಯೋಜನೆಯಲ್ಲಿ 4ಜಿ ನೆಟ್ವರ್ಕ್ ನೀಡ್ತಿದೆ. ಇದ್ರಲ್ಲಿ ಯಾವುದೇ ಬದಲಾವಣೆ ಮಾಡ್ತಿಲ್ಲ. ವೋಡಾಫೋನ್ ಬಳಕೆದಾರರು ಈ ಯೋಜನೆಯಲ್ಲಿ ಅನಿಯಮಿತ ಡೇಟಾ ಮತ್ತು ಕರೆ ಸೌಲಭ್ಯ ನೀಡ್ತಿದೆ. ಕಂಪನಿಯು ಈ ಯೋಜನೆಯಲ್ಲಿ ಮೊದಲಿನಂತೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಜಿ 5 ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯನ್ನು ನೀಡುತ್ತದೆ.

ರೆಡ್ಎಕ್ಸ್ ಬಳಕೆದಾರರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪ್ರತಿ 12 ತಿಂಗಳಿಗೊಮ್ಮೆ 7 ದಿನಗಳ ಐರೋಮ್ ಪ್ಯಾಕ್ ಅನ್ನು ಸಕ್ರಿಯಗೊಳಿಸಬಹುದು. ಈ ಪ್ಯಾಕ್‌ನ ಬೆಲೆ 2,999 ರೂಪಾಯಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...