alex Certify `ಲಸಿಕೆ ಪಾಸ್ಪೋರ್ಟ್ʼ ಎಂದರೇನು….? ಜಾಗತಿಕ ಮಟ್ಟದಲ್ಲಿ ಚರ್ಚೆಯಾಗ್ತಿದೆ ಈ ವಿಷ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

`ಲಸಿಕೆ ಪಾಸ್ಪೋರ್ಟ್ʼ ಎಂದರೇನು….? ಜಾಗತಿಕ ಮಟ್ಟದಲ್ಲಿ ಚರ್ಚೆಯಾಗ್ತಿದೆ ಈ ವಿಷ್ಯ

vaccine passports debate, canadians and esraelies yes, uk people says no, mix  reactions on covid-19 shield | वैश्विक चर्चा के केंद्र में है 'Vaccine  Passports', जानिए क्या है एक्सपर्ट्स की राय |

ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಲಸಿಕೆ ಮಹತ್ವದ ಕೆಲಸ ಮಾಡ್ತಿದೆ. ಅನೇಕ ದೇಶಗಳಲ್ಲಿ ಲಸಿಕೆ ಅಭಿಯಾನ ಬಿರುಸಿನಿಂದ ನಡೆಯುತ್ತಿದೆ. ಈ ಮಧ್ಯೆ ಲಸಿಕೆ ಪಾಸ್‌ಪೋರ್ಟ್‌  ಎಂಬ ಹೊಸ ಪದ ಹುಟ್ಟಿಕೊಂಡಿದೆ. ಇದು ಜಾಗತಿಕ ಮಟ್ಟದಲ್ಲಿ ಚರ್ಚೆಯಾಗ್ತಿದೆ.  ಹೆಚ್ಚು ಜನರು ಲಸಿಕೆ ಪಡೆಯುತ್ತಿರುವಾಗ, ಕೆಲವು ಸರ್ಕಾರಗಳು ತಮ್ಮ ಸಮಾಜವನ್ನು ಲಾಕ್‌ಡೌನ್‌ನಿಂದ ಹೊರಗೆ ತರಲು ಈ ಲಸಿಕೆ ಪಾಸ್‌ಪೋರ್ಟ್‌ ಅವಲಂಬಿಸುತ್ತಿವೆ.

ಈ ಲಸಿಕೆ ಪಾಸ್ಪೋರ್ಟ್ ಅತ್ಯಗತ್ಯ ಪ್ರಮಾಣಪತ್ರವಾಗಿದ್ದು, ಪಾಸ್ಪೋರ್ಟ್ ಹೊಂದಿರುವವರು ಕೋವಿಡ್ -19 ವಿರುದ್ಧ ರಕ್ಷಣಾ ಕವಚ ಪಡೆದಿದ್ದಾರೆ ಎಂದು ತೋರಿಸುತ್ತದೆ. ಈ ಪಾಸ್ಪೋರ್ಟ್ ಅನ್ನು ಅನೇಕ ಸ್ಥಳಗಳಲ್ಲಿ ಬಳಸಬಹುದು. ರೆಸ್ಟೋರೆಂಟ್‌ಗಳು, ಪಬ್‌ಗಳು, ಬಾರ್‌ಗಳು, ಕ್ರೀಡಾ ಸಂಕೀರ್ಣಗಳು ಮತ್ತು ಇತರ ಅನೇಕ ಪ್ರಮುಖ ಸಾರ್ವಜನಿಕ ಸ್ಥಳಗಳ ಪ್ರವೇಶದ ವೇಳೆ ಇದನ್ನು ಕೇಳಲಾಗ್ತಿದೆ.

ಈ ವ್ಯವಸ್ಥೆಯನ್ನು ಪ್ರಸ್ತುತ ಇಸ್ರೇಲ್‌ನಲ್ಲಿ ಜಾರಿಗೆ ತರಲಾಗಿದ್ದು, ಲಸಿಕೆ ಹಾಕಿದ ಜನರಿಗೆ ಚಿತ್ರಮಂದಿರಗಳು, ಕನ್ಸರ್ಟ್ ಹಾಲ್‌ಗಳು, ಒಳಾಂಗಣ ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳಿಗೆ ಪ್ರವೇಶಿಸಲು ಅವಕಾಶ ನೀಡಲಾಗ್ತಿದೆ. ಯುಕೆಯಲ್ಲಿ ಇದನ್ನು ಜಾರಿಗೆ ತರಲು ಸರ್ಕಾರ ಮುಂದಾಗಿತ್ತು. ಆದ್ರೆ ಇದಕ್ಕೆ ವಿರೋಧ ವ್ಯಕ್ತವಾದ ಕಾರಣ ನಿರ್ಧಾರ ಕೈಬಿಟ್ಟಿದೆ. ಇದು ತಾರತಮ್ಯ ಹುಟ್ಟುಹಾಕುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...