ಅನ್ಲಾಕ್ ಒನ್ ನಿಯಮದಡಿ ಜೂನ್ 8ರಿಂದ ಮಾಲ್ ಗಳ ಬಾಗಿಲು ತೆರೆಯಲಿದೆ. ಆದ್ರೆ ಶಾಪಿಂಗ್ ಮಾಲ್ ನಲ್ಲಿ ಖರೀದಿ, ಸುತ್ತಾಟ ಮೊದಲಿನಂತೆ ಇರುವುದಿಲ್ಲ. ಹೊಸ ನಿಯಮ ಪ್ರತಿಯೊಬ್ಬ ಗ್ರಾಹಕ ಮತ್ತು ವ್ಯಾಪಾರಿಗಳಿಗೆ ಅನ್ವಯವಾಗಲಿದೆ.
ಮಾಲ್ ಗಳಲ್ಲಿ ಸುರಕ್ಷತೆಗೆ ಹೆಚ್ಚು ಗಮನ ನೀಡಲಾಗುವುದು. ಈ ಬಗ್ಗೆ ಮಾಲ್, ಗ್ರಾಹಕರಿಗೆ ಭರವಸೆ ನೀಡುವ ಅಗತ್ಯವಿದೆ. ಗ್ರಾಹಕರು ಮತ್ತು ಅಂಗಡಿ ಮಾಲೀಕರಿಗೆ ಆರೋಗ್ಯ ಸೇತು ಅಪ್ಲಿಕೇಷನ್ ಕಡ್ಡಾಯವಾಗಲಿದೆ. ಮಾಸ್ಕ್, ನೈರ್ಮಲ್ಯೀಕರಣ ಮತ್ತು ಥರ್ಮಲ್ ಸ್ಕ್ರೀನಿಂಗ್ ಸಹ ಕಡ್ಡಾಯವಾಗಿದೆ.
ಎಸ್ಕಲೇಟರ್‌ಗಳಲ್ಲಿ ಒಂದು ಸಮಯದಲ್ಲಿ 3 ಕ್ಕಿಂತ ಹೆಚ್ಚು ಜನರು ಹೋಗುವಂತಿಲ್ಲ. 2 ಜನರ ನಡುವೆ 3 ಮೆಟ್ಟಿಲುಗಳ ವ್ಯತ್ಯಾಸವಿರುತ್ತದೆ. ಮೇಕಪ್ ಉತ್ಪನ್ನಗಳು, ಬೂಟುಗಳು ಮತ್ತು ಸುಗಂಧ ದ್ರವ್ಯಗಳಂತಹ ಪ್ರಯೋಗಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು.