alex Certify BIG NEWS: ಭಾರತಕ್ಕೆ ಕೊರೊನಾ ಸಂಬಂಧಿ ಪ್ರಯಾಣ ನಿರ್ಬಂಧವನ್ನು ಸಡಿಲಿಸಿದ ಬ್ರಿಟನ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತಕ್ಕೆ ಕೊರೊನಾ ಸಂಬಂಧಿ ಪ್ರಯಾಣ ನಿರ್ಬಂಧವನ್ನು ಸಡಿಲಿಸಿದ ಬ್ರಿಟನ್​

ಭಾರತೀಯರಿಗೆ ಪ್ರಯಾಣ ನಿರ್ಬಂಧದಲ್ಲಿ ಕೊಂಚ ಸಡಿಲಿಕೆಯನ್ನು ಮಾಡಿರುವ ಬ್ರಿಟನ್​​ ಕೆಂಪು ಪಟ್ಟಿಯ ಸ್ಥಾನದಿಂದ ಭಾರತವನ್ನು ಆ್ಯಂಬರ್​ ಪಟ್ಟಿಯ ಸ್ಥಾನಕ್ಕೇರಿಸಿದೆ. ಇನ್ಮುಂದೆ ಕೊರೊನಾ ಲಸಿಕೆಯ 2 ಡೋಸ್​ ಪಡೆದ ಭಾರತೀಯರು ಹೋಟೆಲ್​ನಲ್ಲಿ ಕಡ್ಡಾಯ ಕ್ವಾರಂಟೈನ್​ಗೆ ಒಳಗಾಗುವ ಅವಶ್ಯಕತೆ ಇರೋದಿಲ್ಲ.

ದೆಹಲಿಯಲ್ಲಿರುವ ಬ್ರಿಟನ್​ ಹೈ ಕಮಿಷನ್​ ಕಚೇರಿಯು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ಬ್ರಿಟನ್​ ಅಂತಾರಾಷ್ಟ್ರೀಯ ಪ್ರಯಾಣದ ನಿಯಮಾವಳಿಯ ಅಡಿಯಲ್ಲಿ ಆ್ಯಂಬರ್​ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ದೇಶದಿಂದ ಬ್ರಿಟನ್​ಗೆ ತೆರಳುವ ನಾಗರಿಕರು 10 ದಿನಗಳ ಕಾಲ ಮನೆಯಲ್ಲಿ ಅಥವಾ ಅವರು ಇಷ್ಟ ಪಡುವ ಯಾವುದೇ ಸೂಕ್ತ ಜಾಗದಲ್ಲಿ ಕ್ವಾರಂಟೈನ್​ ಆಗಬಹುದು ಎಂದು ಹೇಳಿದೆ.

ಕೆಂಪು ಪಟ್ಟಿಯಿಂದ ಭಾರತವನ್ನು ಆ್ಯಂಬರ್​ ಪಟ್ಟಿಯಲ್ಲಿ ಇರಿಸಿರೋದ್ರಿಂದ ಇದು ಬ್ರಿಟನ್​ಗೆ ಪ್ರಯಾಣ ಬೆಳೆಸಬೇಕಾದ ಅನಿವಾರ್ಯತೆಯಲ್ಲಿರುವ ಸಾಕಷ್ಟು ಕುಟುಂಬ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲಕಾರಿಯಾಗಿದೆ. ಕೊರೊನಾ 2ನೆ ಅಲೆಯಿಂದ ಭಾರತವು ಭೀಕರವಾಗಿ ತತ್ತರಿಸಿದ್ದ ಸಮಯದಲ್ಲಿ ಬ್ರಿಟನ್​ ಭಾರತವನ್ನು ಕೆಂಪು ಪಟ್ಟಿಯಲ್ಲಿ ಇರಿಸಿತ್ತು.

ಭಾರತದ ಜೊತೆಯಲ್ಲಿ ಅರಬ್​ ರಾಷ್ಟ್ರ, ಕತಾರ್​, ಬಹ್ರೇನ್​ ಕೂಡ ಆ್ಯಂಬರ್​ ಪಟ್ಟಿಗೆ ಸೇರಿಕೊಂಡಿದೆ. ಈ ಹೊಸ ಬದಲಾವಣೆಯು ಆಗಸ್ಟ್​​ 8ರ ಮುಂಜಾನೆ 4 ಗಂಟೆಯಿಂದ ಜಾರಿಗೆ ಬರಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...