alex Certify ಗೃಹ ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೃಹ ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ

ಉಡುಪಿ: ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ಡಿಸೆಂಬರ್ 15, 16 ರಂದು ಕೆನರಾ ಗೃಹ ಸಾಲ ಮೇಳ ಏರ್ಪಡಿಸಲಾಗಿದೆ.

ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ 1 ಮತ್ತು ಆರ್ಎಹೆಚ್ 1 ವತಿಯಿಂದ ಎರಡು ದಿನಗಳ ಕಾಲ ಗೃಹ ಸಾಲ ಮೇಳವನ್ನು ಕೋರ್ಟ್ ರಸ್ತೆಯ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ಆಯೋಜಿಸಲಾಗಿದೆ.

ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಸಾಲ ಮೇಳ ನಡೆಯಲಿದ್ದು, ಆಕರ್ಷಕ ಬಡ್ಡಿದರದಲ್ಲಿ ಸುಲಭ ಸಾಲ ಸೌಲಭ್ಯವಿರುತ್ತದೆ. ಶೇಕಡ 6.9 ರಿಂದ ಆರಂಭವಾಗುವ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. 30 ವರ್ಷಗಳವರೆಗೆ ಗರಿಷ್ಠ ಮರುಪಾವತಿ ಅವಧಿ ಇರುತ್ತದೆ. ಸ್ಥಳದಲ್ಲೇ ಸಾಲ ಮಂಜೂರಾತಿ ನೀಡಲಾಗುವುದು.PMAAY ಯೋಜನೆಯಡಿ 2.67 ಲಕ್ಷ ರೂಪಾಯಿ ವರೆಗೆ ಬಡ್ಡಿ ರಿಯಾಯಿತಿ ಕೂಡ ಪಡೆಯಬಹುದು ಎಂದು ಹೇಳಲಾಗಿದೆ.

ಸಾಲಕ್ಕೆ ಮುಂಗಡ ಪಾವತಿ ಶುಲ್ಕ ಇರುವುದಿಲ್ಲ. ಸಾಲ ವರ್ಗಾವಣೆ ಮತ್ತು ಟಾಪ್ ಅಪ್ ಸೌಲಭ್ಯವಿದ್ದು, ಪ್ರಯೋಜನ ಪಡೆಯಲು ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...