alex Certify GOOD NEWS: ಬಳಕೆದಾರರಿಗೆ ಹಣ ಸಂಪಾದನೆ ಮಾಡಲು ಅವಕಾಶ ಮಾಡಿಕೊಟ್ಟ ಟ್ವಿಟರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ಬಳಕೆದಾರರಿಗೆ ಹಣ ಸಂಪಾದನೆ ಮಾಡಲು ಅವಕಾಶ ಮಾಡಿಕೊಟ್ಟ ಟ್ವಿಟರ್​..!

ಟ್ವಿಟರ್ ಯಾಕೆ ಉಚಿತ ಸೇವೆ ನೀಡುತ್ತಿದೆ..? ಇಂತಹ ಪ್ರಶ್ನೆ ಎಂದಾದರೂ ನಿಮ್ಮ ಮನಸ್ಸಿನಲ್ಲಿ ಮೂಡಿದೆಯೇ..? ಹಾಗಾದ್ರೆ ಇನ್ಮುಂದೆ ಇಂತಹ ಪ್ರಶ್ನೆಯನ್ನ ಕೇಳುವ ಸಂದರ್ಭವೇ ಬರೋದಿಲ್ಲ.

ತನ್ನ ಅಪ್ಲಿಕೇಶನ್​​ನಲ್ಲಿ ಹೊಸದೊಂದು ಸೌಕರ್ಯವನ್ನ ಪರಿಚಯಿಸಿರುವ ಟ್ವಿಟರ್​ ಇದಕ್ಕೆ ಸೂಪರ್​ ಫಾಲೋವ್ಸ್ ಎಂದು ಹೆಸರಿಟ್ಟಿದೆ. ಇದರ ಅಡಿಯಲ್ಲಿ ಫಾಲೋವರ್ಸ್ ಇನ್ಮುಂದೆ ಹಣವನ್ನ ನೀಡಿ ಬೋನಸ್​ ಟ್ವೀಟಿ, ಕಮ್ಯೂನಿಟಿ ಗ್ರೂಪ್​ ಹಾಗೂ ನ್ಯೂಸ್​ ಲೆಟರ್​ಗಾಗಿ ಹಣವನ್ನ ಚಾರ್ಜ್​ ಮಾಡಬಹುದಾಗಿದೆ.

ಫೇಸ್​ಬುಕ್​, ಯುಟ್ಯೂಬ್​ ಹಾಗೂ githubಗಳಲ್ಲಿ ಬಳಕೆದಾರರಿಗೆ ಹಣ ಗಳಿಸುವ ಆಯ್ಕೆಯನ್ನ ಈ ಹಿಂದೆಯೇ ನೀಡಲಾಗಿದೆ. ಇದೀಗ ಟ್ವಿಟರ್​ ಕೂಡ ತನ್ನ ಬಳಕೆದಾರರಿಗೆ ಈ ಹೊಸ ಅವಕಾಶವನ್ನ ಮಾಡಿಕೊಟ್ಟಿದೆ.

ಈ ಸೌಕರ್ಯದ ಸಹಾಯದಿಂದ ಸುದ್ದಿ ನೀಡುವ ಮಾಧ್ಯಮಗಳು ಹಾಗೂ ವ್ಯಕ್ತಿಗಳು ಹಣವನ್ನ ಸಂಪಾದನೆ ಮಾಡಬಹುದಾಗಿದೆ. ಆದರೆ ಯಾವ ಪ್ರತಿಶತದಲ್ಲಿ ಟ್ವಿಟರ್​ ಈ ಹಣವನ್ನ ಹಂಚಿಕೆ ಮಾಡಿಕೊಳ್ಳಲಿದೆ ಅನ್ನೋದ್ರ ಬಗ್ಗೆ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...